55 ಜಿಲ್ಲೆಗಳಲ್ಲಿ ಪಾರಿಸರಿಕ ಸಮೀಕ್ಷೆ: ಕೇಂದ್ರ ಸರಕಾರ

Update: 2018-07-30 18:14 GMT

ಹೊಸದಿಲ್ಲಿ, ಜು. 30: ಪ್ರಾಣಿ ಹಾಗೂ ಸಸ್ಯ, ಮಾಲಿನ್ಯದಂತಹ ವಿವಿಧ ಮಾನದಂಡವನ್ನು ಒಳಗೊಂಡ 2018-19ರ ಪಾರಿಸರಿಕ ಸಮೀಕ್ಷೆಯಲ್ಲಿ ಮೊದಲ ಬಾರಿಗೆ ದೇಶಾದ್ಯಂತದ 55 ಜಿಲ್ಲೆಗಳು ಒಳಗೊಳ್ಳಲಿವೆ ಎಂದು ಕೇಂದ್ರ ಸರಕಾರ ಸೋಮವಾರ ತಿಳಿಸಿದೆ. ರಾಜ್ಯಸಭೆಯಲ್ಲಿ ಲಿಖಿತ ಹೇಳಿಕೆ ನೀಡಿದ ರಾಜ್ಯ ಪರಿಸರ ಸಚಿವ ಮಹೇಶ್ ಶರ್ಮಾ, ಈಗ ನಡೆಯುತ್ತಿರುವ ಸಚಿವಾಲಯದ ಪಾರಿಸರಿಕ ಮಾಹಿತಿ ವ್ಯವಸ್ಥೆ ಕಾರ್ಯಕ್ರಮದ ಅಡಿಯಲ್ಲಿ ರಾಷ್ಟ್ರೀಯ ಪರಿಸರ ಸಮೀಕ್ಷೆಗೆ ಶಿಫಾರಸು ಮಾಡಲಾಗಿದೆ ಎಂದರು. ಸಮೀಕ್ಷೆಯಿಂದ ದೊರೆಯುವ ದತ್ತಾಂಶ, ಮಾಹಿತಿ ಅಥವಾ ನಕ್ಷೆಗಳು ರಾಷ್ಟ್ರ, ರಾಜ್ಯ ಹಾಗೂ ಜಿಲ್ಲೆಯಲ್ಲಿ ಪರಿಸರ ವ್ಯವಸ್ಥೆಯ ಸೇವೆಯ ವೌಲ್ಯಮಾಪನಕ್ಕೆ ಗಮನಾರ್ಹ ಕೊಡುಗೆ ನೀಡಲಿದೆ. ಕೇಂದ್ರ ಸರಕಾರ ಮೊದಲ ಬಾರಿಗೆ ರಾಷ್ಟ್ರೀಯ ಪರಿಸರ ಸಮೀಕ್ಷೆ ನಡೆಸುತ್ತಿದೆ. 2018-19ರಲ್ಲಿ ಸರ್ವೇ ನಡೆಸಲು 55 ಜಿಲ್ಲೆಗಳನ್ನು ಗುರುತಿಸಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News