ಕಥಾ ಪ್ರಶಸ್ತಿ ಮತ್ತು ಕವಿತಾ ಪ್ರಶಸ್ತಿ

Update: 2018-08-02 18:29 GMT

ಮುಂಬೈ ಸಾಹಿತ್ಯ ಸಾಂಸ್ಕೃತಿಕ ಸಾಂಘಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿದ್ದು ಮುಂಬೈಯ ಕನ್ನಡ ಸಾಹಿತ್ಯ ಲೋಕ ಬಹಳಷ್ಟನ್ನು ನಿರೀಕ್ಷಿಸುತ್ತಿದ್ದಾಗಲೇ ಇಹಯಾತ್ರೆಯನ್ನು ಮುಗಿಸಿದ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಅವರ ಸ್ಮರಣಾರ್ಥ ಕಥೆ ಹಾಗೂ ಕವಿತಾ ಪ್ರಶಸ್ತಿಗಳನ್ನು ಜಗಜ್ಯೋತಿ ಕಲಾ ವೃಂದ ಮುಂಬೈ ಕಳೆದ 21 ವರ್ಷಗಳಿಂದ ಆಯೋಜಿಸುತ್ತಿದೆ. 2018ನೇ ವರ್ಷದ ಪ್ರಶಸ್ತಿಗಾಗಿ ಕನ್ನಡದ ಸಮಸ್ತ ಮಹಿಳೆಯರಿಗಾಗಿ ಆಯೋಜಿಸಲಾಗುವ ಅಖಿಲ ಭಾರತ ಮಟ್ಟದ ಈ ಸ್ಪರ್ಧೆ, ಎರಡು ವಿಭಾಗಗಳಲ್ಲೂ ಪ್ರತ್ಯೇಕವಾಗಿ ರೂ. 5,000 ನಗದು ಬಹುಮಾನ, ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರಗಳನ್ನೊಳಗೊಂಡಿದೆ.

ಸ್ಪರ್ಧೆಯ ನಿಯಮಗಳು

* ಈ ಸ್ಪರ್ಧೆ ರಾಷ್ಟ್ರಾದ್ಯಂತದ ಸಮಸ್ತ ಕನ್ನಡದ ಮಹಿಳೆಯರಿಗಾಗಿ.

* ಪ್ರಕಟಣೆಗೆ ಸಿದ್ಧವಾದ ಸ್ವರಚಿತ ಕಥಾ ಕವಿತಾ ಸಂಗ್ರಹವಾಗಿರಬೇಕು.

* ಸ್ಪರ್ಧೆಗಳಲ್ಲಿ ಭಾಗವಹಿಸುವವರು ಕಥಾ ಪ್ರಶಸ್ತಿಗೆ ಒಂದು ಕಥಾ ಸಂಕಲನ ಅಥವಾ ಕವಿತಾ ಪ್ರಶಸ್ತಿಗೆ ಒಂದು ಕವನ ಸಂಕಲವನ್ನು ಕಳುಹಿಸಬೇಕು. ಒಬ್ಬರೇ ಎರಡು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.

*ಕಥೆ, ಕವಿತೆಗಳನ್ನು ಹಾಳೆಯ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ ಬರೆದಿರಬೇಕು/ ಟೈಪ್ ಮಾಡಿರಬೇಕು. ಕಾರ್ಬನ್ ಪ್ರತಿ, ಜೆರಾಕ್ಸ್ ಹಾಗೂ ಪ್ರಕಟಗೊಂಡ ಹಾಳೆಯ ಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ.

*ಕಥಾ ಪ್ರಶಸ್ತಿಗೆ ಹಸ್ತಪ್ರತಿಯು ಫೂಲ್‌ಸ್ಕೇಪ್ ಹಾಳೆಯಲ್ಲಿ 100 ಪುಟಗಳಿಂದ 130 ಪುಟಗಳ ಮಿತಿಯಲ್ಲಿರಬೇಕು.

*ಕವನ ಸಂಕಲನದಲ್ಲಿ ಕಡಿಮೆಯೆಂದರೂ 30 ಕವಿತೆಗಳಿರಬೇಕು. ಖಂಡ ಕಾವ್ಯ ಅಥವಾ ಚುಟುಕು/ಹನಿಗವನಗಳಾಗಿರಬಾರದು.

*ಹಸ್ತಪ್ರತಿಯಲ್ಲಿ ಹೆಸರು ನಮೂದಿಸದೆ, ಹೆಸರು, ವಿಳಾಸ, ಪರಿಚಯ, ದೂರವಾಣಿ ಸಂಖ್ಯೆ, ಇತ್ತೀಚಿನ ಭಾವಚಿತ್ರದೊಂದಿಗೆ ಹಸ್ತಪ್ರತಿಯ ಜೊತೆಗೆ ಪ್ರತ್ಯೇಕವಾಗಿ ಕಳುಹಿಸಬೇಕು. ಸ್ಪರ್ಧೆಗೆ ಪ್ರವೇಶ ಶುಲ್ಕವಿಲ್ಲ ಅಲ್ಲದೆ ಸ್ಪರ್ಧೆಗೆ ಬಂದ ಕೃತಿಗಳನ್ನು ಹಿಂದಿರುಗಿಸಲಾಗುವುದಿಲ್ಲ.

* ಪ್ರಶಸ್ತಿ ಪಡೆದ ಪ್ರತಿಗಳನ್ನು ಮುದ್ರಿಸುವಾಗ ರಕ್ಷಾ ಪುಟದ ಮೇಲ್ಗಡೆ ಹಾಗೂ ಪ್ರಥಮ ಒಳಪುಟದಲ್ಲಿ ಜಗಜ್ಯೋತಿ ಕಲಾವೃಂದದ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ/ ಕವಿತಾ ಪ್ರಶಸ್ತಿ ವಿಜೇತ ಕೃತಿ 2018 ಎಂದು ಮುದ್ರಿಸಬೇಕು.

*ಒಮ್ಮೆ ಒಂದು ವಿಭಾಗದಲ್ಲಿ ಪ್ರಶಸ್ತಿ ಪಡೆದವರು ಅದೇ ವಿಭಾಗದ ಸ್ಪರ್ಧೆಗೆ ಮತ್ತೆ ಭಾಗವಹಿಸುವಂತಿಲ್ಲ. ಸ್ಪರ್ಧೆಯ ಬಗ್ಗೆ ಯಾವುದೇ ತೀರ್ಮಾನವನ್ನು ಕೈಗೊಳ್ಳುವ ಹಕ್ಕನ್ನು ವೃಂದವು ಕಾಯ್ದಿರಿಸಿಕೊಂಡಿದೆ.

* ಕೃತಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ 15.10.2018.
 ಕೃತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. (ಇಂಗ್ಲಿಷ್‌ನಲ್ಲಿ) 

Sukumar N. Shetty

c/o S. N. Shetty Associates, ground floor, room no.5, Neelkanth sagar chs, Mahatma phule road opp. jadha vwady, dombevali west-421202 email: sukumar@yahoo. in.

ph:9820296840

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News