ಹಾಡಹಗಲೇ ಎಲ್ಲರೆದುರು ಉದ್ಯಮಿಯಿಂದ 70 ಲಕ್ಷ ರೂ. ದೋಚಿದರು!

Update: 2018-08-04 15:47 GMT

ಹೊಸದಿಲ್ಲಿ, ಆ.4: ಫ್ಲೈ ಓವರ್ ಒಂದರಲ್ಲಿ ಹಾಡಹಗಲೇ ತಂಡವೊಂದು ಉದ್ಯಮಿಯೊಬ್ಬರಿಂದ 70 ಲಕ್ಷ ರೂ.ಗಳನ್ನು ದೋಚಿರುವ ಘಟನೆ ದಿಲ್ಲಿಯಲ್ಲಿ ನಡೆದಿದೆ. ದರೋಡೆಯ ದೃಶ್ಯವನ್ನು ದಾರಿಹೋಕನೊಬ್ಬ ಸೆರೆಹಿಡಿದಿದ್ದಾನೆ.

ಗುರ್ವಾಂಗ್ ಗೆ ಉದ್ಯಮಿ ಕಾಶಿಶ್ ಬನ್ಸಾಲ್ ತೆರಳುತ್ತಿದ್ದ ವೇಳೆ ಇಲ್ಲಿನ ನರೈನಾದ ಫ್ಲೈ ಓವರ್ ಸಮೀಪ ಅವರನ್ನು ಬೈಕ್ ನಲ್ಲಿ ಬಂದ ತಂಡವೊಂದು ತಡೆದಿತ್ತು. ಫ್ಲೈ ಓವರ್ ಮಧ್ಯಭಾಗದಲ್ಲಿ ಕಾರನ್ನು ತಡೆದ ದುಷ್ಕರ್ಮಿಗಳು ಗನ್ ತೋರಿಸಿದ್ದಾರೆ. ನಂತರ ಉದ್ಯಮಿಯನ್ನು ಹೊರಗೆಳೆದು ಗನ್ ಮೂಲಕ ಬೆದರಿಸಿ 70 ಲಕ್ಷ ರೂ.ಗಳನ್ನು ದೋಚಿದ್ದಾರೆ.

ಉದ್ಯಮಿಯ ಬಗ್ಗೆ ತಿಳಿದವರಿಂದಲೇ ಈ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News