×
Ad

ಮಾಜಿ ಸಚಿವೆಯ ಪತಿ-ಪ್ರಮುಖ ಆರೋಪಿಯ ಸಂಪರ್ಕದ ಪುರಾವೆಯಿದೆ: ಸಿಬಿಐ

Update: 2018-08-11 19:01 IST

ಪಾಟ್ನಾ, ಆ. 11: ಬಿಹಾರದ ಮುಝಫ್ಫರ್‌ಪುರ್‌ನ ಆಶ್ರಯ ಧಾಮದಲ್ಲಿ ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳದ ತನಿಖೆ ನಡೆಸುತ್ತಿರುವ ಸಿಬಿಐ, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬ್ರಿಜೇಶ್ ಠಾಕೂರ್ ಅವರೊಂದಿಗೆ ಮಾಜಿ ಸಾಮಾಜಿಕ ಕಲ್ಯಾಣ ಸಚಿವೆ ಅವರ ಪತಿ ಮಂಜು ವರ್ಮಾ ಅವರಿಗೆ ಸಂಪರ್ಕ ಇರುವ ಬಗ್ಗೆ ತನ್ನಲ್ಲಿ ಪುರಾವೆ ಇದೆ ಎಂದು ಹೇಳಿದೆ.

ಬಲವಂತಕ್ಕೆ ಮಣಿದು ತನ್ನ ಹುದ್ದೆಗೆ ಬುಧವಾರ ರಾಜಿನಾಮೆ ನೀಡಿರುವ ವರ್ಮಾ, ತನ್ನ ಪತಿ ಹಾಗೂ ಮಾಜಿ ಎಂಎಲ್‌ಸಿ ಚಂಡೇಶ್ವರ ವರ್ಮಾ ಅಮಾಯಕ ಎಂದು ಹೇಳಿರುವ ಹೊರತಾಗಿಯೂ ಸಿಬಿಐ ಅಧಿಕಾರಿಗಳು, ಚಂಡೇಶ್ವರ ವರ್ಮಾ ಹಾಗೂ ಠಾಕೂರ್ ಹಲವು ಬಾರಿ ಮಾತನಾಡಿರುವ, ಮುಝಫ್ಫರ್‌ಪುರ್‌ನಲ್ಲಿರುವ ಆಶ್ರಯಧಾಮಕ್ಕೆ ಕನಿಷ್ಠ 9 ಬಾರಿ ಭೇಟಿ ನೀಡಿರುವ ಬಗ್ಗೆ ಪುರಾವೆ ಇದೆ ಎಂದಿದೆ. ದೂರವಾಣಿ ಕರೆ ವಿವರ ಹಾಗೂ ಮೊಬೈಲ್ ಫೋನ್ ಟವರ್‌ನ ಸ್ಥಾನ ಮಾಜಿ ಸಚಿವೆಯ ಪತಿ ಈ ವರ್ಷ ಜನರಿವರಿ ಹಾಗೂ ಮೇಯಲ್ಲಿ ಮುಝಪ್ಫರಪುರ್‌ನ ಆಶ್ರಯ ಧಾಮಕ್ಕೆ 9 ಬಾರಿ ಭೇಟಿ ನೀಡಿದ್ದಾರೆ. ಪ್ರತಿ ಭೇಟಿಯ ಸಂದರ್ಭ ಅವರು ಒಂದು ಗಂಟೆ ಅಲ್ಲಿ ವ್ಯಯಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News