ಕೀಳುಮಟ್ಟಕ್ಕಿಳಿಯುವ ರಾಜಕಾರಣಿಗಳು

Update: 2018-08-12 18:14 GMT

ಮಾನ್ಯರೇ,

ಮುಂಬೈ ನಗರದ ಹೊರವಲಯವಾದ ಪಾಲ್ಘಾರ್ ಎಂಬಲ್ಲಿ ಎಟಿಎಸ್ ಪೊಲೀಸರು ಒಂದು ಮನೆಗೆ ದಾಳಿ ಮಾಡಿ ಸನಾತನ ಸಂಸ್ಥೆಯ ಒಬ್ಬನನ್ನು ಎಂಟು ನಾಡ ಬಾಂಬ್ ಮತ್ತು ಹಲವು ಧಾರ್ಮಿಕ ಪ್ರಚೋದನೆಯ ಕರಪತ್ರಗಳ ಜೊತೆ ಬಂಧಿಸಿರುವ ಸುದ್ದಿ ನಿಜಕ್ಕೂ ಆಘಾತಕರ. ಮಾಲೆಗಾಂವ್, ಅಜ್ಮೀರ್ ಹಾಗೂ ಸಂಜೋತ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣಗಳಲ್ಲಿ ಕೈವಾಡವಿದ್ದ ಆರೋಪ ಹೊತ್ತಿದ್ದ ಗುಂಪು ಈ ಸನಾತನ ಸಂಸ್ಥೆ.

ಕೇಂದ್ರ ಸರಕಾರ ಮತ್ತು ಅವರ ಗುಲಾಮಿ ಮೀಡಿಯಕ್ಕೆ ಈ ವಿಷಯ ಮೊದಲೇ ಗೊತ್ತಿತ್ತೇ ಎಂಬ ಸಂಶಯ ಮೂಡುತ್ತಿದೆ. ಯಾಕೆಂದರೆ ಆಡಳಿತ ಪಕ್ಷದ ಕೆಲವರು ಮತ್ತು ಅವರ ಗುಲಾಮಿ ಮೀಡಿಯಾದವರು ಕೆಲವು ದಿನಗಳಿಂದ ‘‘ಪಾಕಿಸ್ತಾನದ ಉಗ್ರವಾದಿಗಳು ಭಾರತಕ್ಕೆ ನುಸುಳಿದ್ದು, ಸ್ವಾತಂತ್ರ ದಿನಾಚರಣೆಯಂದು ಅವರು ವಿಧ್ವಂಸಕ ಕೃತ್ಯ ಎಸಗುವ ಹುನ್ನಾರ ನಡೆಸಿದ್ದಾರೆ ಎಂಬ ಗುಪ್ತಚರ ಮಾಹಿತಿ ಸಿಕ್ಕಿದೆ’’ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದ್ದರು.

ಈಗ ಮುಂಬೈಯ ಪಾಲ್ಫರ್‌ನಲ್ಲಿ ಒಬ್ಬ ಸಂಘ ಪರಿವಾರದ ಕಿಡಿಗೇಡಿಯೇ ಸಜೀವ ಬಾಂಬ್‌ಗಳೊಂದಿಗೆ ಸಿಕ್ಕಿ ಬಿದ್ದಿರುವಾಗ ಜನರಿಗೆ ಗೊತ್ತಾದ ಸತ್ಯವೇನೆಂದರೆ, ಕೇಸರಿ ಸಂಘಟನೆಯವರೇ ಬಾಂಬ್ ಸ್ಫೋಟ ಮಾಡಿಸಿ ವಿಧ್ವಂಸಕ ಕೃತ್ಯ ನಡೆಸಿ, ಅದರ ಆರೋಪ ಮುಸ್ಲಿಮರ ಮೇಲೆ ಹೊರಿಸುವುದು, ದೇಶದಲ್ಲಿ ಎಲ್ಲೆಡೆ ರಕ್ತಪಾತ ಮಾಡಿ ಅರಾಜಕತೆ ಸೃಷ್ಟಿಸಿ, 2019ರ ಲೋಕಸಭಾ ಚುನಾವಣೆಯಲ್ಲಿ ಅದರ ಬಂಪರ್ ಲಾಭ ಪಡೆಯುವ ದೂರ ದೃಷ್ಟಿಯ ಷಡ್ಯಂತ್ರ ಇದು ಎಂಬುದು ಮೇಲ್ನೋಟಕ್ಕೆ ತಿಳಿಯಬಹುದು. ನೋಡಿದಿರಾ, ಅಧಿಕಾರಕ್ಕಾಗಿ ಕೆಲವು ಪಕ್ಷದವರು ಎಷ್ಟೊಂದು ನೀಚ ಮಟ್ಟಕ್ಕೆ ಇಳಿಯುತ್ತಾರೆ.

ಲಿಂಗರಾಜರಾವ್, ಕೆ.ಆರ್. ಮೊಹಲ್ಲಾ, ಮೈಸೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News