ಚುನಾವಣೆಗಳನ್ನು ಬಹಿಷ್ಕರಿಸಲು ರಾಜಕೀಯ ಪಕ್ಷಗಳಿಗೆ ರಾಜ್ ಠಾಕ್ರೆ ಕರೆ

Update: 2018-08-30 14:33 GMT

ಮುಂಬೈ,ಆ.30: ವಿವಿಪ್ಯಾಟ್ ಯಂತ್ರಗಳು ಅಥವಾ ಮತಪತ್ರ ವ್ಯವಸ್ಥೆಯನ್ನು ಲಭ್ಯವಾಗಿಸುವವರೆಗೆ ಚುನಾವಣೆಗಳನ್ನು ಬಹಿಷ್ಕರಿಸುವಂತೆ ಮಹಾರಾಷ್ಟ್ರ ನವನಿರ್ಮಾಣ ಸಮಿತಿಯ ಮುಖ್ಯಸ್ಥ ರಾಜ್ ಠಾಕ್ರೆ ಅವರು ಎಲ್ಲ ರಾಜಕೀಯ ಪಕ್ಷಗಳನ್ನು ಆಗ್ರಹಿಸಿದ್ದಾರೆ.

2014ರ ಸಾರ್ವತ್ರಿಕ ಚುನಾವಣೆಗಳು ನಡೆದಾಗಿನಿಂದ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ವಿಶ್ವಾಸಾರ್ಹತೆಯ ಬಗ್ಗೆ ಶಂಕೆಗಳಿವೆ. ಇವಿಎಂ ಗಳಲ್ಲಿ ಹಸ್ತಕ್ಷೇಪ ನಡೆಯುತ್ತಿದೆ ಎಂಬ ಆರೋಪಗಳು ನಂತರದ ಎಲ್ಲ ಚುನಾವಣೆಗಳಲ್ಲಿಯೂ ದೃಢಪಟ್ಟಿವೆ ಎಂದು ಠಾಕ್ರೆ ವಿವಿಧ ಪಕ್ಷಗಳ ಮುಖ್ಯಸ್ಥರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಅಮೆರಿಕ,ಬ್ರಿಟನ್,ಜರ್ಮನಿ,ಜಪಾನ್‌ನಂತಹ ಮುಂದುವರಿದಿರುವ ರಾಷ್ಟ್ರಗಳು ಇವಿಎಂ ಬಳಕೆಯನ್ನು ನಿಲ್ಲಿಸಿ ಮತಪತ್ರ ವ್ಯವಸ್ಥೆಗೆ ಮರಳಿವೆ. ಹೀಗಿರುವಾಗ ನಾವೇಕೆ ಈ ವಿವಾದಾತ್ಮಕ ಪದ್ಧತಿಗೆ ಒತ್ತು ನೀಡುತ್ತಿದ್ದೇವೆ ಎಂದು ಪ್ರಶ್ನಿಸಿರುವ ಅವರು,ಮುಂದಿನ ವರ್ಷದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಇವಿಎಮ್‌ಗಳು ಹ್ಯಾಕ್ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಭಿವ್ಯಕ್ತಿ ಸ್ವಾತಂತ್ರದ ಮೂಲಭೂತ ಹಕ್ಕನ್ನು ಅತಿಕ್ರಮಿಸಲಾಗುತ್ತಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News