ವೃತ್ತಿಪರ ಕೋರ್ಸ್‌ಗಳ ವಿಸ್ತರಣೆಗಾಗಿ ಯುಜಿಸಿಯಿಂದ ಪ್ರಸ್ತಾವಗಳ ಆಹ್ವಾನ

Update: 2018-09-01 14:34 GMT

ಹೊಸದಿಲ್ಲಿ,ಸೆ.1: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ)ವು ತಮ್ಮ ವೃತ್ತಿಪರ ಕೋರ್ಸ್‌ಗಳು ಮತ್ತು ಸಮುದಾಯ ಕಾಲೇಜು ಕಾರ್ಯಕ್ರಮಗಳ ವಿಸ್ತರಣೆಗಾಗಿ ಪ್ರಸ್ತಾವಗಳನ್ನು ಸೆ.6ರೊಳಗೆ ತನಗೆ ಸಲ್ಲಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ.

ವೃತ್ತಿಪರ ತರಬೇತಿ ಸಂಸ್ಥೆಗಳು ತಮ್ಮ ಕೌಶಲ್ಯಾಧಾರಿತ ಕೋರ್ಸ್‌ಗಳ ವಿಸ್ತರಣೆಗಾಗಿ ಯುಜಿಸಿಯಿಂದ ಅನುಮತಿ ಪಡೆದುಕೊಳ್ಳದಿದ್ದರೆ ಈ ಕೋರ್ಸ್‌ಗಳನ್ನು ನಡೆಸಲು ಯಾವುದೇ ಅನುದಾನವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಆಯೋಗದ ಹಿರಿಯ ಅಧಿಕಾರಿಯೋರ್ವರು ಶನಿವಾರ ಇಲ್ಲಿ ತಿಳಿಸಿದರು.

ನ್ಯಾಷನಲ್ ಸ್ಕಿಲ್ ಕ್ವಾಲಿಫಿಕೇಷನ್ ಫ್ರೇಮ್‌ವರ್ಕ್(ಎನ್‌ಎಸ್‌ಕ್ಯೂಎಫ್)ನಡಿ ವೃತ್ತಿಪರ ತರಬೇತಿಯಲ್ಲಿ ಪದವಿ ಕೋರ್ಸ್‌ಗಳನ್ನು ನಡೆಸಲು ಆಯ್ಕೆಯಾಗಿರುವ ಕಾಲೇಜುಗಳಿಗೆ ಮೊದಲ ಮೂರು ವರ್ಷಗಳಿಗೆ 1.85 ಕೋ.ರೂ.ಗಳ ಆರ್ಥಿಕ ನೆರವನ್ನು ಯುಜಿಸಿ ಒದಗಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News