ಪ್ರಧಾನಿ ಮೋದಿಗಾಗಿ 32 ವರ್ಷಗಳ ಕಾಲ ಹುಡುಕಾಟ ನಡೆಸಿದ್ದ ಬ್ಯಾಂಕ್ ಅಧಿಕಾರಿಗಳು !

Update: 2018-09-02 11:34 GMT

ಹೊಸದಿಲ್ಲಿ, ಸೆ.2: ಸರಿಯಾದ ಬ್ಯಾಂಕ್ ಖಾತೆಯೊಂದನ್ನು ತೆರೆಯಲು ನನ್ನ ಬಳಿ ಶಾಸಕನಾಗುವವರೆಗೂ ಹಣ ಇರಲಿಲ್ಲ ಎಂದು ಪ್ರಧಾನಿ ಮೋದಿಯವರು ನಿನ್ನೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಗೆ ಚಾಲನೆ ನೀಡುತ್ತಾ ಹೇಳಿದ್ದರು.

ಶಾಲಾ ದಿನಗಳಲ್ಲಿ ದೇನಾ ಬ್ಯಾಂಕ್ ನಲ್ಲಿ ತನಗೆ ಒಂದು ಖಾತೆಯಿತ್ತು. ಮಕ್ಕಳಿಗಾಗಿ ಉಳಿತಾಯ ಖಾತೆಗಳನ್ನು ಆ ಸಮಯದಲ್ಲಿ ತೆರೆಯಲಾಗಿತ್ತು. ಆದರೆ ತನ್ನ ಖಾತೆಯಲ್ಲಿ ಯಾವುದೇ ಹಣ ಇರಲಿಲ್ಲ ಎಂದವರು ಹೇಳಿದರು.

“ನಾನು ಗ್ರಾಮದಿಂದ ಬೇರೆಡೆಗೆ ಹೋದ ನಂತರ ಬ್ಯಾಂಕ್ ಅಧಿಕಾರಿಗಳು ಖಾತೆಯನ್ನು ಮುಚ್ಚಲು ನನಗಾಗಿ 32 ವರ್ಷಗಳ ಕಾಲ ಹುಡುಕಾಡಿದ್ದರು. 32 ವರ್ಷಗಳ ನಂತರ ಅವರಿಗೆ ನಾನು ಒಂದು ಪ್ರದೇಶದಲ್ಲಿದ್ದೇನೆ ಎನ್ನುವುದು ತಿಳಿಯಿತು. ಹಾಗಾಗಿ ಬ್ಯಾಂಕ್ ಅಧಿಕಾರಿಗಳು ಬಂದರು ಮತ್ತು ಸಹಿ ಹಾಕಿಸಿಕೊಂಡರು. ನಾನು ಗುಜರಾತ್ ನ ಶಾಸಕನಾದ ನಂತರ ಸಂಬಳ ಸಿಗುತ್ತಿದ್ದ ಹಿನ್ನೆಲೆಯಲ್ಲಿ ಖಾತೆಯೊಂದನ್ನು ತೆರೆಯಬೇಕಾಯಿತು” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News