ಪತ್ನಿಯಿಂದ ತೊಂದರೆ ಅನುಭವಿಸುತ್ತಿರುವ ಪುರುಷರಿಗಾಗಿ ಸಮಿತಿ ರಚಿಸಿ

Update: 2018-09-02 11:14 GMT

ಹೊಸದಿಲ್ಲಿ, ಸೆ.2: ಕಾನೂನಿನ ದುರುಪಯೋಗದಿಂದ ‘ಪತ್ನಿಯರ ಕೈಯಲ್ಲಿ ಹಿಂಸೆ ಅನುಭವಿಸುತ್ತಿರುವ’ ಪತಿಯರ ದೂರುಗಳನ್ನು ಸ್ವೀಕರಿಸಲು ಆಯೋಗವೊಂದನ್ನು ರಚಿಸಬೇಕು ಎಂದು ಇಬ್ಬರು ಬಿಜೆಪಿಯ ಸಂಸದರು ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶದ ಘೋಸಿಯ ಬಿಜೆಪಿ ಸಂಸದ ಹರಿನಾರಾಯಣ್ ರಾಜ್ ಭರ್ ಮತ್ತು ಹರ್ದೋಯಿಯ ಸಂಸದ ಅಂಶುಲ್ ವರ್ಮಾ ಈ ಆರೋಪ ಮಾಡಿದವರು. ‘ಪುರುಷ ಆಯೋಗ’ಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಸೆಪ್ಟಂಬರ್ 23ರಂದು ತಾವು ಕಾರ್ಯಕ್ರಮವೊಂದನ್ನು ನಡೆಸಲಿದ್ದೇವೆ ಎಂದವರು ಹೇಳಿದ್ದಾರೆ.

ಲೋಕಸಭೆಯಲ್ಲೂ ಈ ಬಗ್ಗೆ ಧ್ವನಿಯೆತ್ತಿರುವುದಾಗಿ ಇಬ್ಬರು ಸಂಸದರು ತಿಳಿಸಿದ್ದಾರೆ.

“ಪತ್ನಿಯಿಂದ ಕೆಲ ಪುರುಷರೂ ತೊಂದರೆ ಅನುಭವಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ಇಂತಹ ಹಲವು ಪ್ರಕರಣಗಳು ಬಾಕಿಯುಳಿದಿವೆ. ಮಹಿಳೆಯರಿಗೆ ನ್ಯಾಯ ನೀಡಲು ಕಾನೂನು ಹಾಗು ಆಯೋಗಗಳಿವೆ. ಆದರೆ ಪುರುಷರಿಗಾಗಿ ಏನೂ ಇಲ್ಲ. ಈ ಹಿನ್ನೆಲೆಯಲ್ಲಿ ಪುರುಷರಿಗೂ ಆಯೋಗವೊಂದರ ಅಗತ್ಯವಿದೆ” ಎಂದು ರಾಜ್ ಭರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News