ಆಯುಷ್ಮಾನ್ ಭಾರತ್ ಯೋಜನೆಯ ಮೊದಲ ಫಲಾನುಭವಿ 19 ದಿನದ ಶಿಶು

Update: 2018-09-03 15:11 GMT

ಕರ್ನಲ್, ಸೆ. 3: ಕರ್ನಲ್‌ನ ಕಲ್ಪನಾ ಚಾವ್ಲಾ ಸರಕಾರಿ ಆಸ್ಪತ್ರೆಯಲ್ಲಿ ಆಗಸ್ಟ್ 15ರಂದು ಜನಿಸಿದ 19 ದಿನದ ಕರೀಷ್ಮಾ ಪ್ರಧಾನಿ ನರೇಂದ್ರ ಮೋದಿ ಅವರ ಆಯುಷ್ಮಾನ್ ಭಾರತ್ ಯೋಜನೆಯ ಮೊದಲ ಫಲಾನುಭವಿ.

ಯೋಜನೆಗೆ ಸರಕಾರವನ್ನು ಪ್ರಶಂಸಿಸಿರುವ ಕರೀಷ್ಮಾ ತಾಯಿ ಮೌಸಮಿ, ‘‘ವೈದ್ಯಕೀಯದ ಎಲ್ಲ ವೆಚ್ಚವನ್ನು ಸರಕಾರವೇ ಭರಿಸಲಿದೆ. ಇದು ಅತ್ಯುತ್ತಮ ಯೋಜನೆ’’ ಎಂದಿದ್ದಾರೆ.

ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟಂಬರ್ 25ರಂದು ಪ್ರಧಾನ ಮಂತ್ರಿ ಜನ ಆರೋಗ್ಯ ಅಭಿಯಾನ ಆರಂಭಿಸಲಾಗುವುದು ಎಂದು ಘೋಷಿಸಿದ್ದರು.

ಈ ವರ್ಷದ ಆರಂಭದಲ್ಲಿ ಸರಕಾರ ಘೋಷಿಸಿದ ರಾಷ್ಟ್ರೀಯ ಆರೋಗ್ಯ ನೀತಿ ಆಯುಷ್ಮಾನ್ ಭಾರತದ ಪ್ರಮುಖ ಕಾರ್ಯಕ್ರಮ.

‘ಮೋದಿ ಕೇರ್’ ಎಂದು ಕರೆಯಲಾಗುವ ಆಯುಷ್ಮಾನ್ ಭಾರತ್ ಅನ್ನು ಈ ವರ್ಷ ಫೆಬ್ರವರಿಯಲ್ಲಿ ಸರಕಾರ ಆರಂಭಿಸಿತ್ತು. ಈ ಮಹತ್ವಾಕಾಂಕ್ಷಿ ಆರೋಗ್ಯ ನೀತಿ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ದತ್ತಾಂಶದ ಆಧಾರದಲ್ಲಿ 10 ಕೋಟಿಗೂ ಅಧಿಕ ಬಡವರು ಹಾಗೂ ದುರ್ಬಲರಿಗೆ ವೈದ್ಯಕೀಯ ನೆರವು ನೀಡುವ ಭರವಸೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News