ಸೆರೆನಾ ಸೆಮಿ ಫೈನಲ್ ಗೆ

Update: 2018-09-05 18:27 GMT

ನ್ಯೂಯಾರ್ಕ್, ಸೆ.5: ಆರು ಬಾರಿಯ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಯುಎಸ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಆದರೆ, ಹಾಲಿ ಚಾಂಪಿಯನ್ ಸ್ಲೋಯಾನೆ ಸ್ಟೀಫನ್ಸ್ ಸೋತು ಟೂರ್ನಿಯಿಂದ ನಿರ್ಗಮಿಸಿದರು.

ಇಲ್ಲಿ ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಸ್ಟಾರ್ ಆಟಗಾರ್ತಿ ಸೆರೆನಾ 8ನೇ ಶ್ರೇಯಾಂಕದ ಕರೊಲಿನಾ ಪ್ಲಿಸ್ಕೋವಾರನ್ನು 6-4, 6-3 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.

24ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿ ದಾಖಲೆ ಸರಿಗಟ್ಟುವತ್ತ ಚಿತ್ತವಿರಿಸಿರುವ ಸೆರೆನಾ ಸತತ 8 ಗೇಮ್‌ಗಳನ್ನು ಜಯಿಸಿ ಮೊದಲ ಸೆಟ್‌ನ್ನು 6-4 ರಿಂದ ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲಿ ಪ್ಲಿಸ್ಕೋವಾ ವಿರುದ್ಧ ಮೇಲುಗೈ ಸಾಧಿಸಿದ ಸೆರನಾ 6-3 ಅಂತರದಿಂದ ಗೆದ್ದುಕೊಂಡರು.

ಸೆರೆನಾ ಮುಂದಿನ ಸುತ್ತಿನಲ್ಲಿ ಲಾಟ್ವಿಯದ ಅನಸ್ಟೇಸಿಜಾ ಸೆವಾಸ್ಟೊವಾರನ್ನು ಎದುರಿಸಲಿದ್ದಾರೆ. ಸೆವಾಸ್ಟೊವಾ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.3ನೇ ಆಟಗಾರ್ತಿ ಸ್ಟೀಫನ್ಸ್‌ರನ್ನು 6-2,6-3 ನೇರ ಸೆಟ್‌ಗಳಿಂದ ಸೋಲಿಸಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಅಂತಿಮ-4ರ ಸುತ್ತಿನಲ್ಲಿ ಹಿರಿಯ ಆಟಗಾರ್ತಿ ಸೆರೆನಾರ ಸವಾಲು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News