ದ್ರಾವಿಡ್ ದಾಖಲೆ ಸರಿಗಟ್ಟಿದ ರಾಹುಲ್

Update: 2018-09-08 17:11 GMT

ಲಂಡನ್, ಸೆ.8: ಆರಂಭಿಕ ದಾಂಡಿಗ ಕೆ.ಎಲ್. ರಾಹುಲ್ 13 ವರ್ಷ ಹಳೆಯ ಭಾರತದ ಆಟಗಾರ ನಿರ್ಮಿಸಿದ್ದ ದಾಖಲೆಯೊಂದನ್ನು ಸರಿಗಟ್ಟಿದರು.

 5ನೇ ಟೆಸ್ಟ್‌ನ 2ನೇ ದಿನವಾದ ಶನಿವಾರ ಸ್ಟುವರ್ಟ್ ಬ್ರಾಡ್ ನೀಡಿದ ಕ್ಯಾಚ್‌ನ್ನು ಮಿಡ್-ಆನ್‌ನಲ್ಲಿ ಪಡೆದ ರಾಹುಲ್ ಟೆಸ್ಟ್ ಸರಣಿಯೊಂದರಲ್ಲಿ ಗರಿಷ್ಠ ಕ್ಯಾಚ್‌ಗಳನ್ನು ಪಡೆದಿರುವ ರಾಹುಲ್ ದ್ರಾವಿಡ್ ಅವರ ದೀರ್ಘಾವಧಿಯ ದಾಖಲೆಯನ್ನು ಸರಿಗಟ್ಟಿದರು. ವಿಶ್ವಶ್ರೇಷ್ಠ ಫೀಲ್ಡರ್ ದ್ರಾವಿಡ್ 2004-05ರಲ್ಲಿ ಆಸ್ಟ್ರೇಲಿಯದ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಟ್ಟು 13 ಕ್ಯಾಚ್‌ಗಳನ್ನು ಪಡೆದಿದ್ದರು.

 ವೆಸ್ಟ್‌ಇಂಡೀಸ್‌ನ ಬ್ರಿಯಾನ್ ಲಾರಾ ಹಾಗೂ ಆಸ್ಟ್ರೇಲಿಯದ ಬಾಬ್ ಸಿಂಪ್ಸನ್ ಕೂಡ ತಲಾ 13 ಕ್ಯಾಚ್‌ಗಳನ್ನು ಪಡೆದು ದ್ರಾವಿಡ್‌ರೊಂದಿಗೆ ದಾಖಲೆ ಹಂಚಿಕೊಂಡಿದ್ದಾರೆ. ಲಾರಾ ಭಾರತ(2006) ಹಾಗೂ ಇಂಗ್ಲೆಂಡ್(1997-98) ವಿರುದ್ಧ ಈ ಸಾಧನೆ ಮಾಡಿದ್ದರು. ಸಿಂಪ್ಸನ್ ದಕ್ಷಿಣ ಆಫ್ರಿಕ(1957-58)ಹಾಗೂ ವೆಸ್ಟ್‌ಇಂಡೀಸ್(1960-61) ವಿರುದ್ಧ ಈ ಸಾಧನೆ ಮಾಡಿದ್ದಾರೆ.

ಆಸ್ಟ್ರೇಲಿಯದ ಜಾಕ್ ಗ್ರೆಗೊರಿ ಗರಿಷ್ಠ ಕ್ಯಾಚ್‌ಗಳನ್ನು(15)ಪಡೆದ ದಾಖಲೆ ನಿರ್ಮಿಸಿದ್ದಾರೆ. 1920-21ರಲ್ಲಿ ಆ್ಯಶಸ್ ಸರಣಿಯಲ್ಲಿ ಜಾರ್ಜ್ ಈ ಮೈಲುಗಲ್ಲು ಸ್ಥಾಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News