ಸ್ಯಾಫ್ ಕಪ್ ಗೆದ್ದ ಸಂಭ್ರಮದಲ್ಲಿ ಮಾಲ್ಡೀವ್ಸ್ ನಲ್ಲಿ ಸಾರ್ವತ್ರಿಕ ರಜೆ!

Update: 2018-09-16 18:22 GMT

ಮಾಲೆ, ಸೆ.16: ಸ್ಯಾಫ್ ಸುಝುಕಿ ಕಪ್ ಜಯಿಸಿದ ದೇಶದ ಫುಟ್ಬಾಲ್ ತಂಡದ ಸಾಧನೆಯ ಸಂಭ್ರಮಾಚರಣೆ ನಡೆಸುವ ಸಲುವಾಗಿ ಮಾಲ್ಡೀವ್ಸ್ ಸರಕಾರ ಮಂಗಳವಾರ ಸಾರ್ವತ್ರಿಕ ರಜೆ ಘೋಷಿಸಿದೆ. ಯುವ ಆಟಗಾರರನ್ನು ಒಳಗೊಂಡ ಮಾಲ್ಡೀವ್ಸ್ ತಂಡ ಸೋಮವಾರ ಢಾಕಾದಲ್ಲಿ ನಡೆದ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವನ್ನು 2-1 ಅಂತರದಿಂದ ಮಣಿಸಿ ಒಂದು ದಶಕದ ಬಳಿಕ ಸ್ಯಾಫ್ ಕಪ್‌ನ್ನು ಗೆದ್ದುಕೊಂಡು ಐತಿಹಾಸಿಕ ಸಾಧನೆ ಮಾಡಿತ್ತು.

ಸ್ಯಾಫ್ ಕಪ್ ವಿಜೇತ ತಂಡವನ್ನು ಅದ್ದೂರಿಯಾಗಿ ಸ್ವಾಗತಿಸಿ ಕಪ್ ಗೆದ್ದ ಸಂಭ್ರಮಾಚರಣೆ ನಡೆಸುವುದಕ್ಕಾಗಿ ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅಬ್ದುಲ್ ಗಯ್ಯೂಂ ಮಂಗಳವಾರ ದೇಶಕ್ಕೆ ರಜೆ ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಲ್ಡೀವ್ಸ್ ತಂಡ ಸ್ಯಾಫ್ ಕಪ್ ಇತಿಹಾಸದಲ್ಲಿ ಎರಡನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಜರ್ಮನಿಯ ಪೀಟರ್ ಸೆಗರ್ಟ್ ಕೋಚಿಂಗ್‌ನಿಂದ ಪಳಗಿರುವ ಮಾಲ್ಡೀವ್ಸ್ ಪಾಲಿಗೆ ಇದೊಂದು ದೊಡ್ಡ ಗೆಲುವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News