ರಫೇಲ್ ಹಗರಣ ಎಂಬುದು ಹೊಲ್ಲಾಂಡ್ ಹೇಳಿಕೆಯಿಂದ ದೃಢಪಟ್ಟಿದೆ: ಆಪ್

Update: 2018-09-22 15:39 GMT

ನಾಗಪುರ, ಸೆ.22: ರಫೇಲ್ ಒಪ್ಪಂದ ಬೃಹತ್ ಹಗರಣವಾಗಿದೆ ಎಂಬುದು ಈ ಒಪ್ಪಂದದ ಬಗ್ಗೆ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡ್ ನೀಡಿರುವ ಪ್ರತಿಕ್ರಿಯೆಯಿಂದ ಸಾಬೀತಾಗಿದೆ ಎಂದು ಆಮ್ ಆದ್ಮಿ ಪಕ್ಷ(ಆಪ್) ಮುಖಂಡ ಸಂಜಯ್ ಸಿಂಗ್ ಹೇಳಿದ್ದಾರೆ.

ನಾಗಪುರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು, ರಫೇಲ್ ಒಪ್ಪಂದದ ಬಗ್ಗೆ ಫ್ರಾನ್ಸ್‌ನ ಮಾಜಿ ಅಧ್ಯಕ್ಷರ ಪ್ರತಿಕ್ರಿಯೆ ಆಘಾತಕಾರಿಯಾಗಿದ್ದು, ಇದೊಂದು ಭಾರೀ ಹಗರಣ ಎಂಬುದನ್ನು ಸಾಬೀತುಪಡಿಸಿದೆ ಎಂದರು. ರಿಲಯನ್ಸ್ ಡಿಫೆನ್ಸ್ ಸಂಸ್ಥೆಗೆ ಒಪ್ಪಂದದ ಗುತ್ತಿಗೆ ವಹಿಸಿಕೊಡಲು ಕಾರಣವೇನು ಎಂಬುದನ್ನು ಮೋದಿ ಸರಕಾರ ತಿಳಿಸಬೇಕಿದೆ. ರಿಲಯನ್ಸ್ ಸಂಸ್ಥೆಗೆ ಗುತ್ತಿಗೆ ದೊರಕಿಸಿಕೊಡಲು ಮೋದಿ ಸರಕಾರ ಪ್ರಭಾವ ಬೀರಿರುವುದು ಸ್ಪಷ್ಟವಾಗಿದೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News