ಡೆನ್ಮಾರ್ಕ್ ತಾರೆಗೆ 30ನೇ ಕಿರೀಟ

Update: 2018-10-07 18:35 GMT

ಬೀಜಿಂಗ್, ಅ.7: ವಿಶ್ವದ ನಂ.2ನೇ ಆಟಗಾರ್ತಿ ಡೆನ್ಮಾರ್ಕ್‌ನ ಕರೊಲಿನಾ ವೋಝ್ನಿಯಾಕಿ ಚೀನಾ ಓಪನ್ ಟೆನಿಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ರವಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಲಾಟ್ವಿಯಾದ ಅನಸ್ಟಾಸಿಯಾ ಸೆವಾಸ್ಟೋವಾ ವಿರುದ್ಧ 6-3,6-3 ನೇರ ಸೆಟ್‌ಗಳ ಅಂತರದಲ್ಲಿ ಜಯ ಸಾಧಿಸುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

28ರ ಹರೆಯದ ವೋಝ್ನಿಯಾಕಿ ಇದರೊಂದಿಗೆ ವೃತ್ತಿಬದುಕಿನಲ್ಲಿ ಜಯಿಸಿದ ಪ್ರಶಸ್ತಿಗಳ ಸಂಖ್ಯೆಯನ್ನು 30ಕ್ಕೆ ಏರಿಸಿದ್ದಾರೆ. ವೋಝ್ನಿಯಾಕಿ 2010ರಲ್ಲಿ ಚೀನಾ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಇಂದು ಅವರು 20ನೇ ರ್ಯಾಂಕ್‌ನ ಸೆವಾಸ್ಟೋವಾ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ವೋಝ್ನಿಯಾಕಿ 2013ರಿಂದ ಗಾಯದ ಕಾರಣದಿಂದಾಗಿ ಸ್ವಲ್ಪ ಸಮಯ ಟೆನಿಸ್‌ನಿಂದ ದೂರವಾಗಿದ್ದರು. ವೋಝ್ನಿಯಾಕಿ ಇದೀಗ ಡಬ್ಲುಟಿಎ ಸಿಂಗಾಪುರ ಫೈನಲ್ಸ್ ಟೂರ್ನಿಯಲ್ಲಿ ಆಡುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News