ಅಪಾಯಕಾರಿ ಆಟಗಳು

Update: 2018-10-16 18:23 GMT

ಮಾನ್ಯರೇ,

ಅಂತರ್ಜಾಲದಲ್ಲಿ ಇಂದು ನೂರಾರು ಆ್ಯಪ್‌ಗಳು ದೊರೆಯುತ್ತಿವೆ. ಇವುಗಳಲ್ಲಿ ಹಲವು ಉಪಯುಕ್ತವಾದವುಗಳಾದರೂ, ಅಪಾಯಕಾರಿಯಾದ ಮತ್ತು ಚಟಹತ್ತಿಸುವ ಆನ್‌ಲೈನ್ ಗೇಮ್ಸ್ ಆ್ಯಪ್‌ಗಳು ಇಂದು ಮಕ್ಕಳು, ಯುವಜನತೆಯನ್ನು ಸಾವಿನ ದವಡೆಗೆ ದೂಡುತ್ತಿವೆ. ಇಂತಹ ಕೆಲವು ಆಟಗಳು ಮಕ್ಕಳು, ಯುವಕರಿಗೆ ವ್ಯಸನವಾಗಿ ಮಾರ್ಪಟ್ಟಿವೆ. ‘ಮಾಡು ಇಲ್ಲವೇ ಮಡಿ’ ಎನ್ನುವಂತೆ ‘ಆಡು ಅಥವಾ ಜೀವನದ ಆಟ ಮುಗಿಸು’ ಎಂಬ ಸಿದ್ದಾಂತವನ್ನು ಈಗಿನ ಕೆಲವು ಆಟಗಳು ಯುವ ಮನಸ್ಸುಗಳಲ್ಲಿ ಬೆಳೆಸುತ್ತಿವೆ. ಡೆಡ್ಲಿ ಬ್ಲೂವೇಲ್, ಮೋಮೋ ಇತ್ಯಾದಿ ಆಟಗಳು ಮಾರಣಾಂತಿಕ ಚಾಲೆಂಜ್‌ನ ಒಂದು ಟ್ರೆಂಡ್ ಆಗಿದೆ. ಇಂತಹ ಆಟಗಳ ಚಟಕ್ಕೆ ಒಳಗಾದವರು ಇಹವನ್ನೇ ಮರೆತು ಪ್ರಾಣಕಳೆದುಕೊಳ್ಳುವುದು ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಮಕ್ಕಳ ಕೈಗೆ ಈಗ ಸುಲಭದಲ್ಲಿ ಸಿಗುವ ಮೊಬೈಲ್‌ನಿಂದಾಗಿ ಎಲ್ಲೆಡೆ ಇದರ ಹಾವಳಿ ಹೆಚ್ಚಾಗುತ್ತಿದೆ. ಪೋಷಕರು ಮಕ್ಕಳ ಕಡೆ ಹೆಚ್ಚಿನ ನಿಗಾ ವಹಿಸಿದರೆ ಮಾತ್ರ ಮಕ್ಕಳು ಇಂತಹ ವ್ಯಸನಗಳಿಗೆ ಬಲಿಯಾಗುವುದನ್ನು ತಪ್ಪಿಸಬಹುದು.

Writer - -ಪ್ರಿಯಾಂಕಾ ಮಾವಿನಕರ್

contributor

Editor - -ಪ್ರಿಯಾಂಕಾ ಮಾವಿನಕರ್

contributor

Similar News