ಸಸಿಗಳ ಹೆಸರಲ್ಲಿ ಕೋಟಿ ಕೋಟಿ ರೂ. ನಷ್ಟ..!

Update: 2018-10-19 18:23 GMT

ಮಾನ್ಯರೇ,

ಚಿತ್ರದುರ್ಗದ ಐನಳ್ಳಿಯ ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರದಲ್ಲಿ ಸುಮಾರು ಐದು ಸಾವಿರ ಸಸಿಗಳನ್ನು ನಾಶಪಡಿಸಲಾಗಿದೆ ಎಂಬ ವರದಿ ಮಾಧ್ಯಮಗಳಲ್ಲಿ ಬರುತ್ತಿದೆ. ಇದಕ್ಕೆ ಏನೆನ್ನಬೇಕು..? ಈ ಪ್ರಕರಣದ ಹಿಂದೆ ಅಧಿಕಾರಿಗಳ ಕೈವಾಡ ಇದೆ ಎಂಬ ಆರೋಪವೂ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಸಂಬಂಧಿಸಿದವರು ಉತ್ತರಿಸಬೇಕಾಗಿದೆ. ಈ ಸಸಿಗಳ ನಾಶದಿಂದ ಎರಡೂವರೆ ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು ಈ ನಷ್ಟವನ್ನು ತುಂಬುವವರು ಯಾರು..? ಅಲ್ಲದೆ, ರಾಜ್ಯದ ಹಸಿರೀಕರಣಕ್ಕಾಗಿ ಅರಣ್ಯ ಇಲಾಖೆ ಎರಡು ವರ್ಷಗಳಲ್ಲಿ ಎಂಬತ್ತೈದು ಕೋಟಿ ರೂ. ಖರ್ಚು ಮಾಡಿದೆ. ಆದರೆ ರಾಜ್ಯದಲ್ಲಿ ಸಂಪೂರ್ಣ ಹಸಿರೀಕರಣ ಇನ್ನೂ ಆಗಿಲ್ಲ. ಕೋಟಿ ಕೋಟಿ ಸಸಿಗಳನ್ನು ನೆಡಲಾಗಿದ್ದರೂ ಅವುಗಳಲ್ಲಿ ಬದುಕುಳಿಯುವುದು ಶೇಕಡಾ ಹತ್ತರಿಂದ ಮೂವತ್ತರವರೆಗೆ ಮಾತ್ರ. ಈ ಸಸಿಗಳನ್ನು ನೆಟ್ಟ ಬಳಿಕ ಪಾಲನೆ ಮಾಡುವ ಯೋಜನೆ ಇಲ್ಲವೇ..? ಇತ್ತೀಚೆಗೆ ಸ್ವತಃ ಅರಣ್ಯ ಸಚಿವರೇ ಈ ಕುರಿತು ಪ್ರತಿಕ್ರಿಯಿಸಿ ರಾಜ್ಯದಲ್ಲಿ ಐದೂವರೆ ಕೋಟಿ ಗಿಡಗಳನ್ನು ನೆಡಲಾಗಿದ್ದು, ಇದರಲ್ಲಿ ಶೇಕಡಾ ಮೂವತ್ತರವರೆಗೆ ಮಾತ್ರ ಗಿಡಗಳು ಉಳಿಯುತ್ತಿವೆ ಎಂದಿದ್ದಾರೆ. ಹಾಗಾದರೆ ಗಿಡಗಳನ್ನುನೆಡಲು ವ್ಯಯಿಸಿದ 85 ಕೋಟಿ ರೂ.ಗೆ ಬೆಲೆ ಇಲ್ಲದಾಯಿತೇ..? ಇದು ಸಸಿಗಳ ನೆಡುವಿಕೆ ಹೆಸರಲ್ಲಿ ಮಾಡುತ್ತಿರುವ ಹಣ ದುರ್ಬಳಕೆಯೇ..? 

Writer - - ಶಂಶೀರ್ ಬುಡೋಳಿ ಬಂಟ್ವಾಳ

contributor

Editor - - ಶಂಶೀರ್ ಬುಡೋಳಿ ಬಂಟ್ವಾಳ

contributor

Similar News