ಮುಟ್ಟು ಸೂತಕವೇಕೆ?

Update: 2018-10-19 18:24 GMT

ಮಾನ್ಯರೇ,

ಶಬರಿಮಲೆಗೆ ಹೆಣ್ಣು ಮಕ್ಕಳು ಪ್ರವೇಶಿಸುವುದನ್ನು ತಡೆಯಲು ಹಾಗೂ ಹತ್ತಿಕ್ಕಲು ದೇವಾಲಯದ ಭಕ್ತರು, ರಾಷ್ಟ್ರೀಯ ಪಕ್ಷಗಳು, ಕೆಲವು ಮಹಿಳೆಯರು ಕೂಡ ಹೋರಾಟ ಮಾಡುತ್ತಿದ್ದಾರೆೆ. ಈ ಕಾಲಘಟ್ಟದಲ್ಲೂ ಹೆಣ್ಣನ್ನು ಈ ರೀತಿ ನಿರ್ಬಂಧಿಸುವುದು ಎಷ್ಟು ಸರಿ?


ದೇಗುಲ ಪ್ರವೇಶಕ್ಕೆ ಮುಟ್ಟಾಗುವುದೇ ಕಾರಣವೆನ್ನುತ್ತಾರೆ. ಆದರೆ ಹೆಣ್ಣು ಮುಟ್ಟೆಂಬ ಪ್ರಾಕೃತಿಕ ಕ್ರಿಯೆಗೆ ಒಳಪಡದಿದ್ದರೆ ಯಾರು ಜನಿಸಲು ಸಾಧ್ಯ?. ಸಂವಿಧಾನದಲ್ಲಿ ಮಹಿಳೆಯರ ಗೌರವಕ್ಕೆ ಚ್ಯುತಿ ತರುವ ಆಚರಣೆಗಳನ್ನು ತ್ಯಜಿಸಬೇಕೆಂದು ನಿರ್ದೇಶಿಸಲಾಗಿದೆ. ಈ ರೀತಿ ಹೆಣ್ಣನ್ನು ಹೊರಕ್ಕೆ ಇಡುವ ಪದ್ಧತಿಗಳು, ಆಚರಣೆಗಳು ಇನ್ನೂ ಚಾಲ್ತಿಯಲ್ಲಿರುವುದು ಕ್ರೌರ್ಯದ ಪರಮಾವಧಿಯಾಗಿದೆ. ಈ ಶತಮಾನದಲ್ಲೂ ಹೆಣ್ಣನ್ನು ಹೊರಗಿಡುವ ಆಲೋಚನೆಗಳು, ಸಮಾಜದ ಮೇಲೆ ತೀರಾ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಸಂಪ್ರದಾಯದ ಹೆಸರಿನಲ್ಲಿ ಹೆಣ್ಣು ಮಕ್ಕಳ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿರುವವರು ಇನ್ನಾದರೂ ಕಣ್ಣು ತೆರೆಯಲಿ.

Writer - -ಜನನಿವತ್ಸಲ, ಬೊಮ್ಮಸಂದ್ರ

contributor

Editor - -ಜನನಿವತ್ಸಲ, ಬೊಮ್ಮಸಂದ್ರ

contributor

Similar News