ಕಾಂಕ್ರಿಟ್ ರಸ್ತೆಗಳನ್ನು ಕಡಿಯುವುದು ಸರಿಯೇ?

Update: 2018-10-22 18:20 GMT

ಮಾನ್ಯರೇ,

ನಗರದ ಹೆಚ್ಚಿನ ಪ್ರಮುಖ ರಸ್ತೆಗಳೆಲ್ಲ ಕಾಂಕ್ರಿಟೀಕರಣಗೊಂಡಿವೆ. ಈಗ ಈ ರಸ್ತೆಗಳೆಲ್ಲ ಅಗಲವಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ನೆರವಾಗುತ್ತವೆೆ.
 ಆದರೆ ಈ ಸಮಾಧಾನಗಳು ಕೂಡಾ ಕ್ಷಣಿಕವಾಗಿದೆ. ನಗರದಲ್ಲಿ ರಸ್ತೆಗಳು ಕಾಂಕ್ರಿಟೀಕರಣ ಗೊಂಡರೂ ಆಗಾಗ್ಗೆ ಅವುಗಳನ್ನು ಅಲ್ಲಲ್ಲಿ ಕಡಿಯುವುದು, ದೊಡ್ಡ ದೊಡ್ಡ ಹೊಂಡ ತೋಡಿ ತಿಂಗಳುಗಟ್ಟಲೆ ಪೈಪ್ ಲೈನ್ ಕೇಬಲ್ ಕಾಮಗಾರಿಗಳನ್ನು ಮಾಡುವುದು ಇತ್ಯಾದಿಗಳು ಇದೀಗ ನಗರದ ರಸ್ತೆಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಇಂತಹ ರಸ್ತೆ ಕಡಿತ ಹೆಚ್ಚಾಗಿ ಫಾದರ್ ಮುಲ್ಲರ್ ಆಸ್ಪತ್ರೆ ಹತ್ತಿರ, ಫಳ್ನೀರ್, ಬೆಂದೂರು, ಕದ್ರಿ ಹಾಗೂ ಇನ್ನಿತರ ಕಡೆಗಳಲ್ಲಿ ನಡೆಯುತ್ತಿವೆ. ಲಕ್ಷಗಟ್ಟಲೆ ಹಣ ವ್ಯಯ ಮಾಡಿ ನಿರ್ಮಾಣಗೊಂಡ ಕಾಂಕ್ರಿಟ್ ರಸ್ತೆಗಳನ್ನು ಈ ರೀತಿ ಕಡಿಯುವುದಕ್ಕೆ ಏನನ್ನಬೇಕು? ಇಂತಹ ರಸ್ತೆ ಕಡಿತದಿಂದಾಗಿ ಪಾದಚಾರಿಗಳು ಮತ್ತು ವಾಹನ ಚಾಲಕರು ತುಂಬಾ ತೊಂದರೆ ಅನುಭವಿಸುವ ಪರಿಸ್ಥಿತಿ ಇದೆ.

ನಗರದಲ್ಲಿ ಅವೈಜ್ಞಾನಿಕವಾಗಿ ರಸ್ತೆ ಕಾಂಕ್ರಿಟೀಕರಣ ಕೆಲಸಗಳನ್ನು ಮಾಡಿದ್ದರಿಂದಲೇ ಆಗಾಗ್ಗೆ ರಸ್ತೆಗಳನ್ನು ಕಡಿಯಲಾಗುತ್ತದೆ. ಸಂಬಂಧಿತ ಅಧಿಕಾರಿಗಳು ಇನ್ನಾದರೂ ರಸ್ತೆ ಸುಸ್ಥಿತಿಗೊಳಿಸುವಾಗ ಮುಂದಿನ ಸಮಸ್ಯೆಗಳ ಬಗ್ಗೆ ಯೋಚಿಸಿಯೇ ಕ್ರಮ ಕೈಗೊಳ್ಳಲಿ.

Writer - ಜೆ. ಎಫ್. ಡಿ’ಸೋಜಾ, ಅತ್ತಾವರ

contributor

Editor - ಜೆ. ಎಫ್. ಡಿ’ಸೋಜಾ, ಅತ್ತಾವರ

contributor

Similar News