ಎತಿಹಾದ್ ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
Update: 2018-10-24 16:14 IST
ಮುಂಬೈ, ಅ.24: ಅಬುಧಾಬಿಯಿಂದ ಜಕಾರ್ತಕ್ಕೆ ಇಂದು ಮುಂಜಾನೆ ಹೊರಟಿದ್ದ ಎತಿಹಾದ್ ಏರ್‍ವೇಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಂಡೋನೇಷ್ಯಾದ ಮಹಿಳೆಯೊಬ್ಬರು ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.
ಕೂಡಲೇ ವಿಮಾನವನ್ನು ತುರ್ತಾಗಿ ಮುಂಬೈಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಮಹಿಳೆಯನ್ನು ಕೂಡಲೇ ಅಂಧೇರಿಯಲ್ಲಿರುವ ಸೆವೆನ್ ಹಿಲ್ಸ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ತಾಯಿ ಮಗು ಆರೋಗ್ಯದಿಂದಿದ್ದಾರೆ.
ವಿಮಾನ ಜಕಾರ್ತ ವಿಮಾನ ನಿಲ್ದಾಣಕ್ಕೆ ಅಪರಾಹ್ನ 3:05ಕ್ಕೆ ತಲುಪಬೇಕಾಗಿತ್ತಾದರೂ ಈ ಘಟನೆಯಿಂದಾಗಿ ಕನಿಷ್ಠ ಎರಡು ಗಂಟೆ ವಿಳಂಬವಾಗಿ ತನ್ನ ನಿಲ್ದಾಣ ತಲುಪಲಿದೆ.