ಫ್ರೆಂಚ್ ಓಪನ್: ಸಿಂಧು ಕ್ವಾರ್ಟರ್ ಫೆನಲ್‌ಗೆ

Update: 2018-10-26 18:25 GMT

ಪ್ಯಾರಿಸ್, ಅ.26: ಜಪಾನ್‌ನ ಸಯಾಕಾ ಸಾಟೊ ವಿರುದ್ಧ ನೇರ ಗೇಮ್‌ಗಳಿಂದ ಜಯ ಸಾಧಿಸಿರುವ ಭಾರತದ ಪಿ.ವಿ.ಸಿಂಧು ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾಗಿದ್ದಾರೆ.

 ಆದರೆ, ಪುರುಷರ ಸಿಂಗಲ್ಸ್‌ನಲ್ಲಿ ಬಿ.ಸಾಯಿ ಪ್ರಣೀತ್ ಟೂರ್ನಿಯಲ್ಲಿ ಸೋತು ಹೊರ ನಡೆದಿದ್ದಾರೆ.

ಮೂರನೇ ಶ್ರೇಯಾಂಕದ ಸಿಂಧು ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸಯಾಕಾರನ್ನು 21-17, 21-16 ಅಂತರದಿಂದ ಸೋಲಿಸಿ ಅಂತಿಮ-8ರ ಸುತ್ತು ತಲುಪಿದರು. ಕ್ವಾರ್ಟರ್ ಫೈನಲ್‌ನಲ್ಲಿ ಏಳನೇ ಶ್ರೇಯಾಂಕದ ಚೀನಾದ ಹಿ ಬಿಂಗ್‌ಜಿಯಾವೊರನ್ನು ಎದುರಿಸಲಿದ್ದಾರೆ.

 ಇದೇ ವೇಳೆ, ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಪ್ರಣೀತ್ ಏಶ್ಯನ್ ಗೇಮ್ಸ್ ಚಾಂಪಿಯನ್ ಇಂಡೋನೇಶ್ಯಾದ ಜೋನಾಥನ್ ಕ್ರಿಸ್ಟಿ ವಿರುದ್ಧ ಹೆಚ್ಚು ಹೋರಾಟ ನೀಡದೇ 16-21,14-21 ಅಂತರದಿಂದ ಶರಣಾದರು.

ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ -ಚಿರಾಗ್ ಶೆಟ್ಟಿ ಹಾಗೂ ಮನು ಅತ್ರಿ-ಸುಮೀತ್ ರೆಡ್ಡಿ ಉತ್ತಮ ಪ್ರದರ್ಶನ ನೀಡಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು.

ಸಾತ್ವಿಕ್ ಹಾಗೂ ಚಿರಾಗ್ ಚೀನಾದ ಹಿ ಜಿಟಿಂಗ್ ಹಾಗೂ ಟಾನ್ ಕ್ವಿಯಾಂಗ್‌ರನ್ನು 21-13, 21-19 ಅಂತರದಿಂದ ಸೋಲಿಸಿದರು.

ಮನು ಹಾಗೂ ಸುಮೀತ್ ಮತ್ತೊಂದು ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಚೀನಾದ ಆಟಗಾರರಾದ ಲಿಯು ಚೆಂಗ್ ಹಾಗೂ ಝಾಂಗ್ ನಾನ್ ವಿರುದ್ಧ 21-14, 21-16 ಅಂತರದಿಂದ ಜಯ ಸಾಧಿಸಿದ್ದಾರೆ.

ಮೇಘನಾ ಹಾಗೂ ಪೂರ್ವಿಶಾ ರಾಮ್ ಇಂಡೋನೇಶ್ಯಾದ ಗ್ರೆಸಿಯಾ ಪೊಲಿ ಹಾಗೂ ಅಪ್ರಿಯಾನಿ ರಹಾಯು ವಿರುದ್ಧ 15-21, 13-21 ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News