×
Ad

ಪಂಜಾಬ್ ಮುಖ್ಯ ಕೋಚ್ ಆಗಿ ಮೈಕ್ ಹೆಸ್ಸನ್ ಆಯ್ಕೆ

Update: 2018-10-29 23:52 IST

ಹೊಸದಿಲ್ಲಿ, ಅ.29: ನ್ಯೂಝಿಲೆಂಡ್‌ನ ಮಾಜಿ ಕೋಚ್ ಮೈಕ್ ಹೆಸ್ಸನ್ ಐಪಿಎಲ್ ಫ್ರಾಂಚೈಸಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯದ ಬ್ರಾಡ್ ಹಾಜ್‌ರಿಂದ ತೆರವಾದ ಸ್ಥಾನದಲ್ಲಿ ಎರಡು ವರ್ಷಗಳ ಅವಧಿಯ ಒಪ್ಪಂದಕ್ಕೆ ಹೆಸ್ಸನ್ ಸಹಿ ಹಾಕಿದ್ದಾರೆ.

 ಹೆಸ್ಸನ್ ಈ ವರ್ಷದ ಜೂನ್‌ನಲ್ಲಿ ನ್ಯೂಝಿಲೆಂಡ್ ಮುಖ್ಯ ಕೋಚ್ ಹುದ್ದೆಯನ್ನು ತ್ಯಜಿಸಿದ್ದರು. ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆಯಲು ಬಯಸಿದ್ದಾಗಿ ಹೇಳಿದ್ದರು. ಹೆಸ್ಸನ್ ಆಯ್ಕೆಯನ್ನು ಪಂಜಾಬ್ ಸಿಇಒ ಸತೀಶ್ ಮೆನನ್ ದೃಢಪಡಿಸಿದ್ದಾರೆ. ಪಂಜಾಬ್ ಈ ತನಕ ಐಪಿಎಲ್ ಟ್ರೋಫಿ ಜಯಿಸಿಲ್ಲ. 2014ರಲ್ಲಿ ಪ್ಲೇ-ಆಫ್‌ನಲ್ಲಿ ಕಾಣಿಸಿಕೊಂಡಿದ್ದ ಪಂಜಾಬ್ ಫೈನಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ಗೆ ಸೋತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News