ರಸ್ತೆಯುಬ್ಬುಗಳ ಸಮಸ್ಯೆ

Update: 2018-11-01 18:22 GMT

ಮಾನ್ಯರೇ,

ಹೆದ್ದಾರಿಯಲ್ಲಿನ ರಸ್ತೆಯುಬ್ಬುಗಳನ್ನು ನಿರ್ಮೂಲ ಮಾಡಬೇಕು ಎಂಬ ಸುಪ್ರೀಂ ಕೋರ್ಟ್ ನ ಆದೇಶ ಬಹುಶಃ ಶಿವಮೊಗ್ಗ- ಬೆಂಗಳೂರು ಹೆದ್ದಾರಿಗೆ ಅನ್ವಯವಾದಂತಿಲ್ಲ..! ವಾಹನಗಳು ಅಪಘಾತವಾಗಬಾರದೆಂದು ಮಾಡಿರುವ ರಸ್ತೆಯುಬ್ಬುಗಳು ಅತ್ಯಂತ ಎತ್ತರವಾಗಿವೆ. ಹೀಗೆ ಯಾವುದೇ ಮುನ್ಸೂಚನೆ ಕೊಡದ ರಸ್ತೆಯುಬ್ಬುಗಳಿಂದ ಅಪಘಾತಗಳು ತಪ್ಪುವುದಕ್ಕಿಂತ, ಸಂಭವಿಸುವುದೇ ಹೆಚ್ಚು.

ಈ ಹೆದ್ದಾರಿಯಲ್ಲಿ ದಿನಂಪ್ರತಿ ಸಂಚರಿಸುವ ಕೆಎಸ್ಸಾರ್ಟಿಸಿ ಬಸ್‌ನ ಚಾಲಕರೇ ಈ ಉಬ್ಬುಗಳನ್ನು ಗಮನಿಸುವಲ್ಲಿ ವಿಫಲರಾಗುವಾಗ, ಅಪರೂಪಕ್ಕೆಂಬಂತೆ ಸಂಚಾರ ಮಾಡುವ ವಾಹನ ಚಾಲಕರ ಪಾಡಿನ್ನೆಂತು?. ಮುನ್ಸೂಚನಾ ಫಲಕಗಳಿಲ್ಲದ, ಅಗತ್ಯಕ್ಕಿಂತ ಹೆಚ್ಚಾದ ಗಾತ್ರಗಳಲ್ಲಿರುವ ಹಾಗೂ ಲೆಕ್ಕವಿಡಲಾಗದಷ್ಟು ಸಂಖ್ಯೆಗಳಲ್ಲಿರುವ ಉಬ್ಬುಗಳಿಂದಾಗಿ ಇಲ್ಲಿ ಹೆದ್ದಾರಿ ಸಂಚಾರ ಕಷ್ಟಕರವಾಗಿವೆ. ಈ ವಿಷಯದಲ್ಲಿ, ಗೋವಾ ರಾಜ್ಯದ ರಸ್ತೆಯುಬ್ಬುಗಳು; ಅಗತ್ಯಕ್ಕೆ ತಕ್ಕಷ್ಟು ಗಾತ್ರಗಳಲ್ಲಿದ್ದು, ಅಲ್ಲಲ್ಲಿ ಮುನ್ಸೂಚನಾ ಫಲಕಗಳು ಗೋಚರಿಸುವಂತೆ ಹಾಕಿಸಿರುವುದು ಮಾದರಿ ಯೋಗ್ಯ. ಒಂದೋ; ಗೋವಾ ಮಾದರಿಯಂತಹ ರಸ್ತೆಯುಬ್ಬುಗಳನ್ನು ಹಾಕಿಸುವಂತಾಗಬೇಕು. ಇಲ್ಲವೋ, ಸಂಪೂರ್ಣವಾಗಿ ರಸ್ತೆಯುಬ್ಬುಗಳನ್ನು ನಾಮಾವಶೇಷ ಮಾಡುವಂತಾಗಬೇಕು. ಇಲ್ಲವಾದಲ್ಲಿ, ಇನ್ನಷ್ಟು ಅಪಘಾತಗಳಿಗೆ ರಸ್ತೆಯಬ್ಬುಗಳೇ ನೇರ ಕಾರಣವಾಗುತ್ತವೆ (ವಿಶೇಷವಾಗಿ ರಾತ್ರಿ ಹೊತ್ತಿನಲ್ಲಿ) ಎಂಬ ವಾಸ್ತವವನ್ನು ಸಂಬಂಧಪಟ್ಟವರು ಇನ್ನಾದರೂ ಅರಿಯಬೇಕು.

Writer - -ಮಹಾಂತೇಶ್, ಶಿವಮೊಗ್ಗ

contributor

Editor - -ಮಹಾಂತೇಶ್, ಶಿವಮೊಗ್ಗ

contributor

Similar News