ನನ್ನಂತ ಬ್ರಹ್ಮಚಾರಿಗಳನ್ನು ಗೌರವಿಸಿ: ಬಾಬಾ ರಾಮ್ ದೇವ್

Update: 2018-11-04 10:23 GMT

ಹೊಸದಿಲ್ಲಿ, ನ.4: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆತ್ತವರ ಮತದಾನದ ಹಕ್ಕನ್ನು ಹಿಂದಕ್ಕೆ ಪಡೆಯಬೇಕು ಮತ್ತು ತನ್ನ ಹಾಗೆ ಇರುವ ಬ್ರಹ್ಮಚಾರಿಗಳನ್ನು ಗೌರವಿಸಬೇಕು ಎಂದು ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.

“ಈ ದೇಶದಲ್ಲಿ ನನ್ನ ಹಾಗೆ ಇರುವ ಬ್ರಹ್ಮಚಾರಿಗಳನ್ನು ಗೌರವಿಸಬೇಕು ಮತ್ತು ಮದುವೆಯಾಗಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆತ್ತವರ ಮತದಾನದ ಹಕ್ಕನ್ನು ಹಿಂಪಡೆದುಕೊಳ್ಳಬೇಕು” ಎಂದು ಪತಂಜಲಿ ಯೋಗಪೀಠದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಾ ಹೇಳಿದರು.

ರಾಮ್ ದೇವ್ ಈ ಹಿಂದೆಯೂ ತಾನು ಯಶಸ್ವಿಯಾಗಿರುವುದಕ್ಕೆ ಬ್ರಹ್ಮಚಾರಿಯಾಗಿರುವುದೇ ಕಾರಣ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News