ಕಾಲು ಮುರಿದರೂ ಓಟ ಪೂರ್ಣಗೊಳಿಸಿದ ಜಪಾನ್‌ನ ಅಥ್ಲೀಟ್ !

Update: 2018-11-14 18:27 GMT

ಟೋಕಿಯೊ, ನ.14: ಜಪಾನ್‌ನ ಮಹಿಳಾ ಅಥ್ಲೀಟ್ ರಿಲೇ ಮ್ಯಾರಥಾನ್‌ನಲ್ಲಿ ಓಡುವಾಗ ಬಲಗಾಲು ಮುರಿದರೂ, ಸ್ಪರ್ಧೆಯಿಂದ ಹಿಂದೆ ಸರಿಯದೆ ಅಂಬೆಗಾಲಲ್ಲೇ ಓಟ ಪೂರ್ಣಗೊಳಿಸಿದ ಘಟನೆ ವರದಿಯಾಗಿದೆ.

19ರ ಹರೆಯದ ರೀ ಈಡಾಳ ಅಂಬೆಗಾಲಲ್ಲಿ ಓಡುವ ದೃಶ್ಯ ಮನಕಲಕುವಂತಿದ್ದು, ಆಕೆಯ ಪ್ರಯತ್ನವನ್ನು ಕ್ರೀಡಾಭಿಮಾನಿಗಳು ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಆಕೆ ಸಹ ಓಟಗಾರ್ತಿಗೆ ರಿಲೇ ಪತಾಕೆ ಹಸ್ತಾಂತರ ಮಾಡಿದ ಅಪೂರ್ವ ಕ್ಷಣದ ವೀಡಿಯೊ ವೈರಲ್ ಆಗಿದೆ.

 ಅ.21ರಂದು ಫುಕ್ಯಾಕೊದಲ್ಲಿ ನಡೆದ ಪ್ರಿನ್ಸೆಸ್ ಏಕಿದಿನ್ ರಿಲೇ ರೇಸ್‌ನಲ್ಲಿ ಈಡಾಳ ಅವರು ಓಡುತ್ತಿರುವಾಗ ಅವರ ಕಾಲು ಮುರಿಯಿತು. ಈಡಾಳ ಸ್ಪರ್ಧೆಯಿಂದ ನಿವೃತ್ತಿಯಾಗಲು ನಿರಾಕರಿಸಿದರು. ಸುಮಾರು 200 ಮೀಟರ್ ದೂರವನ್ನು ಅಂಬೆಗಾಲಿಟ್ಟುಕೊಂಡೇ ಸಾಗಿ ಸಹ ಓಟಗಾರ್ತಿಗೆ ಬಾವುಟ ಹಸ್ತಾಂತರಿಸಿದರು. ಅಷ್ಟರ ವೇಳೆಗೆ ಅವರ ಎರಡೂ ಕಾಲುಗಳಿಗೂ ಗಾಯವಾಗಿತ್ತು. ಗಾಯಾಳು ಈಡಾಳರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ಕು ತಿಂಗಳುಗಳ ಕಾಲ ಅವರು ನಡೆದಾಡುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News