12ನೇ ಆವೃತ್ತಿಯ ಐಪಿಎಲ್ ಸ್ಟಾರ್ಕ್‌ರನ್ನು ಕೆಬಿಟ್ಟ ಕೆಕೆಆರ್

Update: 2018-11-14 18:29 GMT

ಸಿಡ್ನಿ, ನ.14: ಕೋಲ್ಕತಾ ನೈಟ್ ರೈಡರ್ಸ್ ತಂಡ ಈ ವಾರ ಟೆಸ್ಟ್ ಮೆಸೇಜ್ ಮೂಲಕ ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್‌ಗೆ ತಂಡದಿಂದ ಕೈಬಿಡುವ ಕುರಿತು ಸಂದೇಶ ರವಾನಿಸಿದೆ. ಹೀಗಾಗಿ ಅವರು ಮುಂದಿನ ವರ್ಷ ನಡೆಯಲಿರುವ ಐಪಿಎಲ್‌ನಿಂದ ದೂರ ಉಳಿಯಲಿದ್ದು, ಇಂಗ್ಲೆಂಡ್‌ನಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ತಯಾರಿಯತ್ತ ಗಮನ ನೀಡಲಿದ್ದಾರೆ.

2018ರ ಋತುವಿನಲ್ಲಿ ವಾರ್ಷಿಕ ಬಿಡ್ಡಿಂಗ್ ಹಣಾಹಣಿಯಲ್ಲಿ 1.47 ಮಿಲಿಯನ್ ಡಾಲರ್‌ಗೆ ಕೆಕೆಆರ್ ತಂಡದಿಂದ ಖರೀದಿಸಲ್ಪಟ್ಟಿದ್ದ ಎಡಗೈ ವೇಗದ ಬೌಲರ್ ಸ್ಟಾರ್ಕ್ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಆದರೆ, ಬಲಗಾಲಿನ ಗಾಯದಿಂದಾಗಿ ಐಪಿಎಲ್ ಟೂರ್ನಿಯಲ್ಲಿ ಆಡಿರಲಿಲ್ಲ.

2019ರ ಟೂರ್ನಮೆಂಟ್‌ನಲ್ಲಿ ನಮ್ಮ ಯೋಜನೆಯಲ್ಲಿ ನಿಮ್ಮನ್ನು ಸೇರಿಸಿಕೊಂಡಿಲ್ಲ ಎಂದು ಸ್ಟಾರ್ಕ್‌ಗೆ ತಿಳಿಸಿರುವ ಕೆಕೆಆರ್ ಫ್ರಾಂಚೈಸಿ ಇದಕ್ಕೆ ಸ್ಪಷ್ಟ ಕಾರಣವನ್ನು ನೀಡಿಲ್ಲ.

‘‘ನಾನು 2 ದಿನಗಳ ಹಿಂದೆ ಕೋಲ್ಕತಾ ಫ್ರಾಂಚೈಸಿಯ ಮಾಲಕರಿಂದ ಟೆಸ್ಟ್ ಮೆಸೇಜ್‌ನ್ನು ಸ್ವೀಕರಿಸಿದ್ದೇನೆ. ನನ್ನನ್ನು ಒಪ್ಪಂದದಿಂದ ಕೈಬಿಡಲಾಗಿದೆ ಎಂದು ತಿಳಿಸಲಾಗಿದೆ’’ಎಂದು ಸ್ಟಾರ್ಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News