ಅಮೃತಸರ ಗ್ರೆನೇಡ್ ದಾಳಿ ಪ್ರಕರಣ: ಪ್ರಮುಖ ಆರೋಪಿಯ ಸೆರೆ
Update: 2018-11-24 22:40 IST
ಚಂಢೀಗಡ, ನ.24: ಅಮೃತಸರದಲ್ಲಿ ಗ್ರೆನೇಡ್ ದಾಳಿ ನಡೆಸಿದ ಪ್ರಮುಖ ಆರೋಪಿಯನ್ನು ಸೆರೆಹಿಡಿದದ್ದಾಗಿ ಪಂಜಾಬ್ ಪೊಲೀಸರು ತಿಳಿಸಿದ್ದಾರೆ. ಅಮೃತಸರ ಜಿಲ್ಲೆಯ ನಿರಂಕಾರಿ ಸತ್ಸಂಗ್ ಭವನ್ ನಲ್ಲಿ ಈ ದಾಳಿ ನಡೆದಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಅವ್ತಾರ್ ಸಿಂಗ್ ನನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಡಿಜಿಪಿ ಸುರೇಶ್ ಅರೋರಾ ಹೇಳಿದ್ದಾರೆ. ಆರೋಪಿಯಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದವರು ಹೇಳಿದ್ದಾರೆ.
ಸತ್ಸಂಗ್ ಭವನ್ ನಲ್ಲಿ ನಿರಾಂಕರಿ ವಿಭಾಗದ ಅನುಯಾಯಿಗಳ ಮೇಲೆ ಅವ್ತಾರ್ ಪಾಕಿಸ್ತಾನದ ತಯಾರಿಸಲಾದ ಗ್ರೆನೇಡ್ ಎಸೆದಿದ್ದ ಎಂದವರು ಮಾಹಿತಿ ನೀಡಿದ್ದಾರೆ.