ವಿಶ್ವಕಪ್ ಹಾಕಿ: ಫೈನಲ್ ಪಂದ್ಯ ವೀಕ್ಷಿಸಲಿರುವ ಸಚಿನ್

Update: 2018-12-15 18:12 GMT

ಭುವನೇಶ್ವರ, ಡಿ.15: ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ವಿಶ್ವಕಪ್ ಹಾಕಿ ಪಂದ್ಯಾವಳಿಯ ಅಂತಿಮ ಪಂದ್ಯ ವೀಕ್ಷಿಸಲು ರವಿವಾರ ದೇವಾಲಯಗಳ ನಗರಿ ಭುವನೇಶ್ವರದ ಕಳಿಂಗ ಸ್ಟೇಡಿಯಂಗೆ ತೆರಳಲಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ದೃಢಪಡಿಸಿರುವ ಅವರು, ‘‘ವಿಶ್ವಕಪ್‌ನಂತಹ ಮಹಾ ಕ್ರೀಡಾಕೂಟವನ್ನು ಸುವ್ಯವಸ್ಥಿತವಾಗಿ ಆಯೋಜಿಸಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ಹಾಕಿ ಇಂಡಿಯಾವನ್ನು ಅಭಿನಂದಿಸುವೆ. ಇಂತಹ ಭವ್ಯ ಕ್ರೀಡಾಕೂಟದ ಫೈನಲ್ ಪಂದ್ಯವನ್ನು ವೀಕ್ಷಿಸಲು ನಾನು ಕಳಿಂಗ ಸ್ಟೇಡಿಯಂಗೆ ಆಗಮಿಸಲಿದ್ದೇನೆ’’ ಎಂದು ಮಾಸ್ಟರ್ ಬ್ಲಾಸ್ಟರ್ ತಿಳಿಸಿದ್ದಾರೆ.

ಒಡಿಶಾ ಸಿಎಂ ಪಟ್ನಾಯಕ್ ಸಚಿನ್ ಅವರ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದು, ಅವರಿಗೆ ಧನ್ಯವಾದ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News