ಬಿಜೆಪಿ ಸಂಸದೀಯ ಪಕ್ಷದ ಸಭೆ: ಸರಕಾರದ ನಿಲುವು ಪ್ರಶ್ನಿಸಿದ ಸಂಸದರು

Update: 2018-12-18 16:46 GMT

ಹೊಸದಿಲ್ಲಿ, ಡಿ. 18: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಕಾನೂನು ಜಾರಿಗೊಳಿಸುವಂತೆ ಕೇಂದ್ರ ಸರಕಾರದ ಮೇಲೆ ಸಂಘಪರಿವಾರದ ಸಂಘಟನೆಗಳು ಒತ್ತಡ ಹೇರುತ್ತಿರುವ ನಡುವೆ, ಗೃಹ ಸಚಿವ ರಾಜನಾಥ್ ಸಿಂಗ್ ಮಂಗಳವಾರ, ಈ ವಿಷಯದಲ್ಲಿ ತಾಳ್ಮೆ ಕಾಯ್ದುಕೊಳ್ಳುವಂತೆ ಬಿಜೆಪಿ ಶಾಸಕರಲ್ಲಿ ಮನವಿ ಮಾಡಿದ್ದಾರೆ.

ಬಿಜೆಪಿ ಸಂಸದೀಯ ಸಭೆಯಲ್ಲಿ ಸಂಸದರಾದ ರವೀಂದ್ರ ಕುಶ್ವಾಹ ಹಾಗೂ ಹರಿ ನಾರಾಯಣ ರಾಜ್‌ಭರ್ ಆಯೋಧ್ಯೆ ವಿಷಯದ ಬಗ್ಗೆ ಸರಕಾರದ ನಿಲುವು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ರಾಮ ಜನಿಸಿದ ಸ್ಥಳದಲ್ಲೇ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಿದ್ದಾರೆ ಎಂದು ಹೇಳಿದರು ಹಾಗೂ ಈ ಬಗ್ಗೆ ಪಕ್ಷದ ಸಂಸದರು ತಾಳ್ಮೆ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು. ಇಬ್ಬರು ಸಂಸದರು ಈ ವಿಷಯ ಎತ್ತಿದ್ದರು. ಇತರ ಕೆಲವರು ಇದಕ್ಕೆ ಬೆಂಬಲ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅಥವಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಈ ಸಭೆಯಲ್ಲಿ ಹಾಜರಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News