ಅಹಮದಾಬಾದ್‌ನ ಇಸ್ರೋ ಕ್ಯಾಂಪಸ್‌ನಲ್ಲಿ ಬೆಂಕಿ ಆಕಸ್ಮಿಕ
Update: 2018-12-28 21:20 IST
ಅಹಮದಾಬಾದ್, ಡಿ. 28: ಅಹಮದಾಬಾದ್‌ನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಆವರಣದ ಒಳಗಡೆ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದೆ.
ಕೂಡಲೇ ಐದು ಅಗ್ನಿಶಾಮಕ ದಳದ ವಾಹನ ಘಟನಾ ಸ್ಥಳಕ್ಕೆ ಧಾವಿಸಿತು. ಘಟನೆ ಇಸ್ರೊ ಸ್ಟೋರ್ ರೂಮ್ ನಲ್ಲಿ ಸಂಭವಿಸಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ. ಈ ವರ್ಷ ಮೇಯಲ್ಲಿ ಅಹ್ಮದಾಬಾದ್ ಇಸ್ರೋದ ಬಾಹ್ಯಾಕಾಶ ಅನ್ವಯ ಕೇಂದ್ರ (ಎಸ್‌ಎಸಿ) ದಲ್ಲಿರುವ ಸಂಶೋಧನಾ ಕೇಂದ್ರದಲ್ಲಿ ಪ್ರಮುಖ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಬೆಂಕಿ ಎರಡು ಗಂಟೆಗಳ ಕಾಲ ಹಬ್ಬಿತ್ತು. ಆದರೆ, ಯಾರಿಗೂ ಗಾಯಗಳಾಗಿರಲಿಲ್ಲ.
ಆ್ಯಂಟೆನಾ ಪರೀಕ್ಷೆ ನಡೆಸುವ ಪ್ರಯೋಗಾಲಯವಾಗಿ ಬಳಸುತ್ತಿದ್ದ ಕಟ್ಟಡದ ಒಳಗಡೆ ಬೆಂಕಿ ಆಕಸ್ಮಿಕ ಸಂಭವಿಸಿತ್ತು. ನಗರದ ಸೆಟಲೈಟ್ ಪ್ರದೇಶದಲ್ಲಿರುವ ಎಸ್‌ಎಸಿ ಕ್ಯಾಂಪಸ್‌ನ ಒಳಗಡೆ ಈ ಕಟ್ಟಡ ಇದೆ. ಪ್ರಯೋಗಾಲಯದ ಗೋಡೆಯಲ್ಲಿ ಯು-ಫೋಮ್ ವಸ್ತುಗಳು ಇದ್ದ ಕಾರಣಕ್ಕೆ ಬೆಂಕಿ ತ್ವರಿತವಾಗಿ ಹಬ್ಬಿತ್ತು.