ವೋಝ್ನಿಯಾಕಿ, ಕೆರ್ಬರ್ 3ನೇ ಸುತ್ತಿಗೆ ಲಗ್ಗೆ

Update: 2019-01-16 18:14 GMT

ಮೆಲ್ಬೋರ್ನ್, ಜ.16: ಆಕ್ರಮಣಕಾರಿ ಆಟವಾಡಿದ ಹಾಲಿ ಚಾಂಪಿಯನ್ ಕರೊಲಿನಾ ವೋಝ್ನಿಯಾಕಿ ಹಾಗೂ 2ನೇ ಶ್ರೇಯಾಂಕಿತೆ ಆ್ಯಂಜೆಲಿಕ್ ಕೆರ್ಬರ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಇಲ್ಲಿ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ವೋಝ್ನಿಯಾಕಿ ಸ್ವೀಡನ್‌ನ ಜೊಹನ್ನಾ ಲಾರ್ಸನ್‌ರನ್ನು 6-1, 6-3 ನೇರ ಸೆಟ್‌ಗಳಿಂದ ಮಣಿಸಿದರು.

ಟೂರ್ನಿಯ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿರುವ ಡೆನ್ಮಾರ್ಕ್ ಆಟಗಾರ್ತಿ ವೋಝ್ನಿಯಾಕಿ 2013ರ ಬಳಿಕ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಂಡ ಮೊದಲ ಆಟಗಾರ್ತಿ ಎನಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ. 6 ವರ್ಷಗಳ ಹಿಂದೆ ವಿಕ್ಟೋರಿಯ ಅಝರೆಂಕಾ ಈ ಸಾಧನೆ ಮಾಡಿದ್ದರು.

28 ರ ಹರೆಯದ ವೋಝ್ನಿಯಾಕಿ ಮುಂದಿನ ಸುತ್ತಿನಲ್ಲಿ ರಶ್ಯದ ಮರಿಯಾ ಶರಪೋವಾರನ್ನು ಎದುರಿಸಲಿದ್ದಾರೆ.

ದಿನದ ಮತ್ತೊಂದು ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಜರ್ಮನಿಯ ವಿಂಬಲ್ಡನ್ ಚಾಂಪಿಯನ್ ಕೆರ್ಬರ್ ಬ್ರೆಝಿಲ್‌ನ ಕ್ವಾಲಿಫೈಯರ್ ಬಿಟ್ರಿಝ್ ಹಡಾಡ್‌ರನ್ನು 6-2, 6-3 ನೇರ ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತಿಗೆ ತಲುಪಿದ್ದಾರೆ.

2016ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿರುವ ಕೆರ್ಬರ್ ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯದ ವೈರ್ಲ್ಡ್‌ಕಾರ್ಡ್ ಆಟಗಾರ್ತಿ ಕಿಂರ್ಲಿ ಬಿರ್ರೆಲ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News