ಲಾರಸ್ ಕ್ರೀಡಾ ಪ್ರಶಸ್ತಿಗೆ ವಿನೇಶ್ ನಾಮನಿರ್ದೇಶನ

Update: 2019-01-17 18:16 GMT

ಹೊಸದಿಲ್ಲಿ, ಜ.17: ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಗುರುವಾರ ಪ್ರತಿಷ್ಠಿತ ಲಾರಸ್ ಕ್ರೀಡಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಭಾರತದ ಮೊದಲ ಕ್ರೀಡಾಳು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

2019ರ ವರ್ಷದ ‘ಲಾರಸ್ ವರ್ಲ್ಡ್ ಸ್ಪೋರ್ಟಿಂಗ್ ಕಮ್‌ಬ್ಯಾಕ್’ ವಿಭಾಗದಲ್ಲಿ ವಿನೇಶ್ ನಾಮನಿರ್ದೇಶನಗೊಂಡಿದ್ದಾರೆ. ವಿನೇಶ್ ಅವರು ಗಾಲ್ಫ್ ದಿಗ್ಗಜ ಟೈಗರ್ ವುಡ್ಸ್, ಕೆನಡಾದ ಸ್ನೋಬೋರ್ಡರ್ ಮಾರ್ಕ್ ಮೆಕ್‌ಮೊರಿಸ್ ಸಹಿತ ಹಲವು ಕ್ರೀಡಾಳುಗಳಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ.

ವಿನೇಶ್ 2018ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ, ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಹಾಗೂ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ನಗೆ ಬೀರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News