ಗುಜರಾತಿನಲ್ಲಿ ‘ಚಡ್ಡಿ ಗ್ಯಾಂಗ್’ಗೆ ಸೇರಿದ ಇಬ್ಬರ ಬಂಧನ

Update: 2019-01-22 14:48 GMT

ಹೈದರಾಬಾದ್,ಜ.22: 2017ರಿಂದಲೂ ನಗರದಲ್ಲಿ ಹಲವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ‘ಚಡ್ಡಿ ಗ್ಯಾಂಗ್’ನ ಇಬ್ಬರು ಸದಸ್ಯರನ್ನು ಹೈದರಾಬಾದ್ ಪೊಲೀಸರು ಗುಜರಾತಿನ ದಾಹೋಡ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

ಹಸನ್ ನರಸಿಂಗ್ ಮತ್ತು ರಾಜು ಸವಸಿಂಗ್ ಬರಿಯಾ ಅವರನ್ನು ಜ.18ರಂದು ಬಂಧಿಸಿ ನಗರಕ್ಕೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದರು. ತಲೆಮರೆಸಿಕೊಂಡಿರುವ ಆರೋಪಿಗಳಾದ ವಿನೋದ,ಪಂಕಜ ಮತ್ತು ಜೇಸಂ ಜೊತೆ ಸೇರಿಕೊಂಡು ಕಳ್ಳತನಗಳನ್ನು ನಡೆಸಿದ್ದನ್ನು ಬಂಧಿತರು ವಿಚಾರಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News