×
Ad

ನಿವೃತ್ತಿಬಗ್ಗೆ ಯೋಚಿಸದ ಲಿಯಾಂಡರ್ ಪೇಸ್

Update: 2019-01-24 23:42 IST

ಹೊಸದಿಲ್ಲಿ, ಜ.24: ಬದಲಾಗುತ್ತಿರುವ ವೃತ್ತಿಪರ ಟೆನಿಸ್ ಜೊತೆಗೆ ತನ್ನ ಶಕ್ತಿಯನ್ನು ಹೆಚಿ ಸಿಕೊಳ್ಳಲು ಬಯಸಿರುವ ಭಾರತದ ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ನಿವೃತ್ತಿಯ ಯೋಚನೆ ಮಾಡದಿರಲು ನಿರ್ಧರಿಸಿದ್ದಾರೆ.

45ರ ಹರೆಯದ ಪೇಸ್ ಪುರುಷರ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಈತನಕ 18 ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಕ್ರೀಡಾ ಹಿನ್ನೆಲೆಯಿರುವ ತಂದೆ-ತಾಯಿಯ ಮಗನಾಗಿರುವ ಪೇಸ್ 1991ರಲ್ಲಿ ವೃತ್ತಿಪರ ಟೆನಿಸ್‌ಗೆ ಕಾಲಿಟ್ಟಿದ್ದರು. ಸಿಂಗಲ್ಸ್ ಆಟಗಾರನಾಗಿ 73ನೇ ರ್ಯಾಂಕಿಗೆ ತಲುಪಿದ್ದರು. 1996ರಲ್ಲಿ ಅಟ್ಲಾಂಟ ಗೇಮ್ಸ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಕಂಚು ಜಯಿಸಿದ್ದ ಪೇಸ್ ಕ್ರಿಕೆಟ್ ಕ್ರೇಜ್‌ಯಿರುವ ಭಾರತದ ಪರ ಮೊದಲ ಬಾರಿ ಒಲಿಂಪಿಕ್ಸ್ ಕ್ರೀಡೆಯ ವೈಯಕ್ತಿಕ ವಿಭಾಗದಲ್ಲಿ ಪದಕ ಗೆದ್ದುಕೊಟ್ಟಿದ್ದರು. 2016ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಮಾರ್ಟಿನ್ ಹಿಂಗಿಸ್‌ರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ ಬಳಿಕ ಪೇಸ್ ಗೆಲುವಿನ ಸಿಹಿ ಸವಿದಿಲ್ಲ. ಆದಾಗ್ಯೂ ಟೆನಿಸ್ ರ್ಯಾಕೆಟನ್ನು ತ್ಯಜಿಸಲು ಅವರು ಸಿದ್ಧರಿಲ್ಲ

ನನಗೆ ಟೆನಿಸ್ ಎಂದರೆ ಪಂಚಪ್ರಾಣ. ಈ ಕ್ರೀಡೆಗೆ ಫಿಟ್‌ನೆಸ್ ಮುಖ್ಯ. ಕಠಿಣ ಶ್ರಮ ವಹಿಸಿದರೆ ಫಿಟ್‌ನೆಸ್ ಉಳಿಸಿಕೊಳ್ಳಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News