ಆರನೇ ಬಾರಿ ನೂರರೊಳಗೆ ಆಲೌಟಾದ ಇಂಗ್ಲೆಂಡ್
Update: 2019-01-25 23:49 IST
ಬ್ರಿಡ್ಜ್‌ಟೌನ್, ಜ.25: ಇಂಗ್ಲೆಂಡ್ ತಂಡ ಗುರುವಾರ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಪ್ರಥಮ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 77 ರನ್‌ಗೆ ಆಲೌಟಾಗಿದೆ. ಇಂಗ್ಲೆಂಡ್ ತಂಡ ವಿಂಡೀಸ್ ವಿರುದ್ಧ ಟೆಸ್ಟ್‌ನಲ್ಲಿ ನಾಲ್ಕನೇ ಬಾರಿ ಕನಿಷ್ಠ ಮೊತ್ತಕ್ಕೆ ಕುಸಿದಿದೆ. ವೇಗದ ಬೌಲರ್ ಕೆಮರ್ ರೋಚ್ ಕೇವಲ 17 ರನ್‌ಗೆ 5 ವಿಕೆಟ್ ಉರುಳಿಸಿ ಆಂಗ್ಲರಿಗೆ ಆಘಾತ ನೀಡಿದರು.
ಇಂಗ್ಲೆಂಡ್ ಈ ಶತಮಾನದಲ್ಲಿ ಟೆಸ್ಟ್ ಇನಿಂಗ್ಸ್ ವೊಂದರಲ್ಲಿ ಆರನೇ ಬಾರಿ 100 ರನ್‌ನೊಳಗೆ ಸರ್ವಪತನ ಕಂಡಿದೆ. 2002ರಲ್ಲಿ ಆಸ್ಟ್ರೇಲಿಯ ವಿರುದ್ಧ 79, 2007ರಲ್ಲಿ ಶ್ರೀಲಂಕಾ ವಿರುದ್ಧ 81, 2009ರಲ್ಲಿ ವಿಂಡೀಸ್ ವಿರುದ್ಧ 51, 2012ರಲ್ಲಿ ಪಾಕ್ ವಿರುದ್ಧ 72 ಹಾಗೂ ಕಳೆದ ವರ್ಷ ನ್ಯೂಝಿಲೆಂಡ್ ವಿರುದ್ಧ 58 ರನ್‌ಗೆ ಆಲೌಟಾಗಿತ್ತು.