×
Ad

ಸುನೀಲ್ ಚೆಟ್ರಿ, ಗಂಭೀರ್, ಶರತ್,ಅಜಯ್‌ಗೆ ಪದ್ಮಶ್ರೀ

Update: 2019-01-25 23:51 IST

ಹೊಸದಿಲ್ಲಿ, ಜ.25: ಭಾರತದ ಫುಟ್ಬಾಲ್ ಆಟಗಾರ ಸುನೀಲ್ ಚೆಟ್ರಿ, ಕ್ರಿಕೆಟಿಗ ಗೌತಮ್ ಗಂಭೀರ್ ಸಹಿತ ಒಟ್ಟು 8 ಕ್ರೀಡಾಳುಗಳಿಗೆ ಈ ವರ್ಷದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಒಟ್ಟು 94 ಜನರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಶುಕ್ರವಾರ ಪ್ರಕಟಿಸಲಾಗಿದೆ. ಸುನೀಲ್ ಚೆಟ್ರಿ(ಫುಟ್ಬಾಲ್), ಹರಿಕಾ ದ್ರೋಣವಲ್ಲಿ(ಚೆಸ್), ಗೌತಮ್ ಗಂಭೀರ್(ಕ್ರಿಕೆಟ್), ಶರತ್ ಕಮಲ್(ಟೇಬಲ್ ಟೆನಿಸ್), ಬೊಂಬಯ್ಲಿದೇವಿ(ಆರ್ಚರಿ), ಬಜರಂಗ್ ಪೂನಿಯಾ(ಕುಸ್ತಿ), ಪ್ರಶಾಂತಿಸಿಂಗ್(ಬಾಸ್ಕೆಟ್‌ಬಾಲ್)ಹಾಗೂ ಅಜಯ್ ಠಾಕೂರ್(ಕಬಡ್ಡಿ) ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News