ಕ್ರೆಜ್‌ಸಿಕೊವಾ-ರಾಮ್‌ಗೆ ಮಿಶ್ರ ಡಬಲ್ಸ್ ಟ್ರೋಫಿ
Update: 2019-01-26 23:36 IST
ಮೆಲ್ಬೋರ್ನ್,ಜ.26: ಮೂರನೇ ಶ್ರೇಯಾಂಕದ ಬಾರ್ಬೊರ ಕ್ರೆಜ್‌ಸಿಕೊವಾ ಹಾಗೂ ರಾಜೀವ್ ರಾಮ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಶನಿವಾರ ಮಿಶ್ರ ಡಬಲ್ಸ್ ಪ್ರಶಸ್ತಿ ಜಯಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ಕ್ರೆಜ್‌ಸಿಕೊವಾ-ರಾಮ್ ಜೋಡಿ ಸ್ಥಳೀಯ ಫೇವರಿಟ್ ಅಸ್ಟ್ರಾ ಶರ್ಮಾ ಹಾಗೂ ಜಾನ್-ಪ್ಯಾಟ್ರಿಕ್ ಸ್ಮಿತ್‌ರನ್ನು 7-6(3),6-1 ಸೆಟ್‌ಗಳಿಂದ ಸೋಲಿಸಿತು. ಅಮೆರಿಕದ ಆಟಗಾರ ರಾಮ್ ಮೊದಲ ಬಾರಿ ಗ್ರಾನ್‌ಸ್ಲಾಮ್‌ನಲ್ಲಿ ಯಶಸ್ಸಿನ ರುಚಿ ಕಂಡರು. ಝೆಕ್‌ನ ಕ್ರೆಜಿಸಿಕೊವಾ ಕಳೆದ ವರ್ಷ ಸಹ ಆಟಗಾರ್ತಿ ಕಟೆರಿನಾ ಸಿನಿಯಾಕೊವಾ ಜೊತೆಗೂಡಿ ಎರಡು ಮಹಿಳಾ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು. ಇದೀಗ ಮೊದಲ ಬಾರಿ ಗ್ರಾನ್‌ಸ್ಲಾಮ್‌ನಲ್ಲಿ ಮಿಕ್ಸೆಡ್ ಡಬಲ್ಸ್ ಟ್ರೋಫಿ ಜಯಿಸಿದರು.