×
Ad

ದ.ಆಫ್ರಿಕ ವಿರುದ್ಧ ಟಿ20 ಸರಣಿ: ಪಾಕ್ ತಂಡಕ್ಕೆ ಆಮಿರ್ ಸೇರ್ಪಡೆ

Update: 2019-01-26 23:39 IST

ಇಸ್ಲಾಮಾಬಾದ್, ಜ.26: ದ.ಆಫ್ರಿಕ ವಿರುದ್ಧ ಫೆಬ್ರವರಿ ತಿಂಗಳಿನಿಂದ ಆರಂಭವಾಗುವ ಮೂರು ಪಂದ್ಯಗಳ ಟಿ20 ಸರಣಿಗೆ ಪಾಕಿಸ್ತಾನ ತಂಡವನ್ನು ಶನಿವಾರ ಪ್ರಕಟಿಸಲಾಗಿದ್ದು, ಮುಹಮ್ಮದ್ ಆಮಿರ್ ಮರಳಿ ಸ್ಥಾನ ಪಡೆದಿದ್ದಾರೆ.

ವೇಗದ ಬೌಲರ್ ವಕಾಸ್ ಮಸೂದ್ ಬದಲಿಗೆ 15 ಸದಸ್ಯರ ತಂಡದಲ್ಲಿ ಆಮಿರ್‌ರನ್ನು ಸೇರ್ಪಡೆ ಮಾಡಲಾಗಿದೆ. ‘‘2020ರ ವರ್ಷದ ಮಧ್ಯದಲ್ಲಿ ಆಸ್ಟ್ರೇಲಿಯದಲ್ಲಿ ನಡೆಯುವ ಐಸಿಸಿ ಟಿ20 ಪಂದ್ಯಾವಳಿಯನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಕಟ್ಟಲಾಗುತ್ತಿದೆ, ಹಾಗಾಗಿ ನಮ್ಮ ತಂಡದ ಹಿರಿಯ ಹಾಗೂ ಕಿರಿಯ ಆಟಗಾರರನ್ನು ಹೆಚ್ಚು ಹೆಚ್ಚು ಪಂದ್ಯಗಳಲ್ಲಿ ತೊಡಗಿಸುವಂತೆ ಮಾಡುತ್ತಿದ್ದೇವೆ’’ ಎಂದು ತಂಡದ ಆಯ್ಕೆ ಸಮಿತಿ ಮುಖ್ಯಸ್ಥ, ಮಾಜಿ ನಾಯಕ ಇಂಝಮಾಮ್‌ವುಲ್-ಹಕ್ ತಿಳಿಸಿದ್ದಾರೆ.

ದ.ಆಫ್ರಿಕ ವಿರುದ್ಧದ ಏಕದಿನ ಸರಣಿ ಮುಗಿದ ಬಳಿಕ ಟಿ20 ತಜ್ಞ ಆಟಗಾರರಾದ ಆಸಿಫ್ ಅಲಿ ಹಾಗೂ ಸಾಹಿಬ್‌ಝಾದಾ ಫರ್ಹಾನ್ ಟಿ20 ಸರಣಿಗಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಏಕದಿನ ಸರಣಿ ಆಡುತ್ತಿರುವ ಇಮಾಮ್‌ವುಲ್‌ಹಕ್ ಹಾಗೂ ಶಾನ್ ಮಸೂದ್ ತವರಿಗೆ ವಾಪಸಾಗಲಿದ್ದಾರೆ.

ಫೆ.1ರಂದು ಕೇಪ್‌ಟೌನ್‌ನಲ್ಲಿ ಪ್ರಥಮ ಟಿ20 ಪಂದ್ಯ ನಡೆಯಲಿದ್ದು, ಜೋಹಾನ್ಸ್‌ಬರ್ಗ್‌ನಲ್ಲಿ ಫೆ.3ರಂದು ಎರಡನೇ ಹಾಗೂ ಫೆ.6ರಂದು ಸೆಂಚೂರಿಯನ್‌ನಲ್ಲಿ 3ನೇ ಪಂದ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News