ಪ್ರಜ್ಞೇಶ್, ಅಂಕಿತಾ ಜೀವನಶ್ರೇಷ್ಠ ಸಾಧನೆ
Update: 2019-01-28 23:39 IST
ಹೊಸದಿಲ್ಲಿ,ಜ.28: ಆಸ್ಟ್ರೇಲಿಯ ವಿರುದ್ಧ ತನ್ನ ಚೊಚ್ಚಲ ಗ್ರಾನ್‌ಸ್ಲಾಮ್ ಆಡಿದ ಭಾರತೀಯ ಟೆನಿಸ್ ತಾರೆ ಪ್ರಜ್ಞೇಶ್ ಗುಣೇಶ್ವರನ್ ಮತ್ತು ಸಿಂಗಾಪುರ ಐಟಿಎಫ್ ಚಾಂಪಿಯನ್‌ಶಿಪ್ ವಿಜೇತೆ ಅಂಕಿತಾ ರೈನಾ ಸೋಮವಾರ ತಮ್ಮ ಕ್ರೀಡಾ ಜೀವನದ ಶ್ರೇಷ್ಠ ರ್ಯಾಂಕಿಂಗ್‌ಗೆ ಏರಿದ್ದಾರೆ. ಏಳು ಅಂಕಗಳ ಏರಿಕೆಯನ್ನು ಕಂಡ ಪ್ರಜ್ಞೇಶ್ ಸದ್ಯ ಪುರುಷರ ಸಿಂಗಲ್ಸ್ ರ್ಯಾಂಕಿಂಗ್ ಪಟ್ಟಿಯಲ್ಲಿ 102ನೇ ಸ್ಥಾನಕ್ಕೇರಿದರೆ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಂಕಿತಾ ರೈನಾ 35 ಸ್ಥಾನಗಳ ಜಿಗಿತವನ್ನು ದಾಖಲಿಸಿ 168ನೇ ಸ್ಥಾನಕ್ಕೇರಿದ್ದಾರೆ.
ಚೆನ್ನೈ ಮೂಲದ ಎಡಗೈ ಆಟಗಾರ ಪ್ರಜ್ಞೇಶ್ ಕೊಲ್ಕತಾದಲ್ಲಿ ನಡೆಯಲಿರುವ ಡೇವಿಸ್ ಕಪ್ ಅರ್ಹತಾ ಪಂದ್ಯದಲ್ಲಿ ಇಟಲಿ ವಿರುದ್ಧ ಭಾರತದ ಸವಾಲನ್ನು ಪ್ರತಿನಿಧಿಸುತಿದ್ದರೆ ಅಂಕಿತಾ ಮುಂದಿನ ವಾರ ಕಝಕ್‌ಸ್ತಾನದ ಅಸ್ತಾನದಲ್ಲಿ ನಡೆಯಲಿರುವ ಫೆಡ್ ಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.