×
Ad

25 ಸಾವಿರ ರೂ. ಪಾವತಿಸಿ ಚುನಾವಣೆ ಸ್ಪರ್ಧಿಸಿ: ಎಐಎಡಿಎಂಕೆ

Update: 2019-01-30 22:04 IST

ಹೊಸದಿಲ್ಲಿ, ಜ. 30: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವವರು ನಾಮಪತ್ರ ಸಲ್ಲಿಸುವ ಸಂದರ್ಭ 25 ಸಾವಿರ ರೂ. ಪಾವತಿಸುವಂತೆ ಎಐಐಡಿಎಂಕೆ ತನ್ನ ನಾಯಕರಿಗೆ ತಿಳಿಸಿದೆ. ಎಐಎಡಿಎಂಕೆಗೆ ಗಮನಾರ್ಹ ಬೆಂಬಲ ಇರುವ ತಮಿಳುನಾಡು, ಪುದುಚೇರಿ ಸ್ಥಾನಗಳ ಚುನಾವಣಾ ಟಿಕೆಟ್‌ಗೆ ಇದು ಅನ್ವಯವಾಗುತ್ತದೆ.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಪಕ್ಷದ ನಾಯಕರು 20 ಸಾವಿರ ರೂ. ಪಾವತಿಸಿ 4.2.2019ರಿಂದ 10.2.2019ರ ಒಳಗೆ ನಾಮಪತ್ರ ಸಲ್ಲಿಸಿ ಎಂದು ಎಐಎಡಿಎಂಕೆ ಘೋಷಿಸಿರುವುದಾಗಿ ಮೂಲಗಳು ತಿಳಿಸಿವೆ. 25 ಸಾವಿರ ರೂ. ಪಾವತಿಸಿ ನಾಮಪತ್ರ ಸಲ್ಲಿಸಲು ಎಲ್ಲ 40 ಕ್ಷೇತ್ರಗಳನ್ನು (39 ತಮಿಳುನಾಡು ಹಾಗೂ 1 ಪುದುಚೇರಿ) ಪಟ್ಟಿ ಮಾಡಲಾಗಿದೆ ಎಂದು ಅವು ಹೇಳಿವೆ.

2014 ಏಪ್ರಿಲ್-ಮೇಯಲ್ಲಿ ನಡೆದ ಲೋಕಸಭೆ ಚುನಾವಣೆಗಿಂತ ಮುನ್ನ ಕೂಡ ಎಐಎಡಿಎಂಕೆ ಪಕ್ಷದ ಅಭ್ಯರ್ಥಿ ಆಕಾಂಕ್ಷಿಗಳಿಗೆ ಇದೇ ರೀತಿಯ ಅಧಿಸೂಚನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News