×
Ad

ಶ್ರೀಲಂಕಾಕ್ಕೆ ವಿಶ್ವಕಪ್ ಗೆಲುವು ಕಷ್ಟಕರ: ಅರ್ಜುನ ರಣತುಂಗ

Update: 2019-02-01 23:25 IST

ಕೊಲಂಬೊ, ಫೆ.1: ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ಆಟಗಾರರ ಅಶಿಸ್ತಿನ ವರ್ತನೆಯಿಂದಾಗಿ ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಶಸ್ತಿ ಜಯಿಸುವುದು ಕಷ್ಟಸಾಧ್ಯ ಎಂದು ಮಾಜಿ ನಾಯಕ ಅರ್ಜುನ ರಣತುಂಗ ಅಭಿಪ್ರಾಯಪಟ್ಟಿದ್ದಾರೆ.

1996ರಲ್ಲಿ ಶ್ರೀಲಂಕಾ ತಂಡ ಚೊಚ್ಚಲ ವಿಶ್ವಕಪ್ ಗೆದ್ದಾಗ ನಾಯಕರಾಗಿದ್ದ ರಣತುಂಗ ‘‘ಮೇ 30 ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗುವ ಈ ಬಾರಿಯ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಟೂರ್ನಿಯ ಗ್ರೂಪ್ ಹಂತವನ್ನು ದಾಟುವುದು ಅನುಮಾನ. ಕ್ರಿಕೆಟ್ ಮಂಡಳಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಆಟಗಾರರು ಪರಸ್ಪರ ಕಚ್ಚಾಡುತ್ತಿದ್ದಾರೆ’’ ಎಂದರು.

ಪ್ರಸ್ತುತ ಶ್ರೀಲಂಕಾ ಸರಕಾರದಲ್ಲಿ ಸಾರಿಗೆ ಸಚಿವರಾಗಿರುವ 55ರ ಹರೆಯದ ರಣತುಂಗ ‘‘ಇತ್ತೀಚೆಗೆ ತಂಡದ ಕಳಪೆ ಪ್ರದರ್ಶನಕ್ಕೆ ರಾಷ್ಟ್ರೀಯ ಕ್ರಿಕೆಟ್ ಮಂಡಳಿ ಹಾಗೂ ಹಲವು ಆಟಗಾರರು ಕಾರಣ. ನಾವು ನಮ್ಮ ಆಟಗಾರರಲ್ಲಿ ಶಿಸ್ತನ್ನು ತರಬೇಕಾಗಿದೆ’’ ಎಂದು ಟಿ-20 ನಾಯಕ ಲಸಿತ್ ಮಾಲಿಂಗ ಹಾಗೂ ಹಂಗಾಮಿ ನಾಯಕ ತಿಸಾರ ಪೆರೇರ ನಡುವಿನ ಗುದ್ದಾಟವನ್ನು ಉಲ್ಲೇಖಿಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News