ಮುದ್ರಾ ಯೋಜನೆಯಡಿ 7.23 ಲಕ್ಷ ಕೋಟಿ ರೂ. ಮೊತ್ತದ 15.56 ಲಕ್ಷ ಸಾಲ ವಿಲೇವಾರಿ: ಗೋಯಲ್

Update: 2019-02-01 17:59 GMT

ಹೊಸದಿಲ್ಲಿ, ಫೆ.1: ಕೇಂದ್ರ ಸರಕಾರ 7.23 ಲಕ್ಷ ಕೋಟಿ ರೂ. ಮೊತ್ತದ 15.56 ಲಕ್ಷ ಸಾಲಗಳನ್ನು ಮುದ್ರಾ ಯೋಜನೆಯಡಿ ನೀಡಿದೆ ಎಂದು ಹಂಗಾಮಿ ವಿತ್ತ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ.

ಶುಕ್ರವಾರ ಲೋಕಸಭೆಯಲ್ಲಿ 2019-20ರ ಮಧ್ಯಂತರ ಬಜೆಟ್ ಮಂಡಿಸುವ ವೇಳೆ ಮಾತನಾಡಿದ ಗೋಯಲ್, ಮುದ್ರಾ ಯೋಜನೆಯ ಶೇ.70 ಫಲಾನುಭಾವಿಗಳು ಮಹಿಳೆಯರಾಗಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಮಾತೃತ್ವ ಯೋಜನೆ ಮತ್ತು 26 ವಾರಗಳ ಹೆರಿಗೆ ರಜೆಯನ್ನು ನೀಡುವುದು ಇತ್ಯಾದಿಯಾಗಿ ಮಹಿಳೆಯರ ಸಬಲೀಕರಣಕ್ಕಾಗಿ ನರೇಂದ್ರ ಮೋದಿ ಸರಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಈ ವೇಳೆ ಬಡಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕ ಒದಗಿಸುವ ಉಜ್ವಲ ಯೋಜನೆಯನ್ನೂ ಪ್ರಶಂಸಿಸಿದ ಗೋಯಲ್, ಈ ಯೋಜನೆಯಡಿ ಎಂಟು ಕೋಟಿ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಒಂದು ಕೋಟಿ ರೂ. ಮೊತ್ತದ ಸಾಲವನ್ನು ಇನ್ನು ಮುಂದೆ ಕೇವಲ 59 ನಿಮಿಷಗಳಲ್ಲಿ ಪಡೆದುಕೊಳ್ಳಬಹುದು. ಸರಕಾರದ ಕೌಶಲ್ಯ ತರಬೇತಿ ಕಾರ್ಯಕ್ರಮಗಳಡಿ ಒಂದು ಕೋಟಿಗೂ ಅಧಿಕ ಯುವಕ/ಯುವತಿಯರು ತರಬೇತಿ ಪಡೆದುಕೊಂಡಿದ್ದಾರೆ ಎಂದು ಗೋಯಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News