ಉ.ಪ್ರ. ಸರಕಾರದ ಪ್ರತಿಕ್ರಿಯೆ ಅಸಮಾಧಾನಕರ: ಮೇಲ್ವಿಚಾರಣಾ ಸಮಿತಿ

Update: 2019-02-04 16:55 GMT

ಹೊಸದಿಲ್ಲಿ, ಫೆ. 4: ಯುಮುನಾ ನದಿ ಶುದ್ಧೀಕರಣ ವಿಚಾರದಲ್ಲಿ ಉತ್ತರಪ್ರದೇಶ ಆಡಳಿತದ ಪ್ರತಿಕ್ರಿಯ ತೀವ್ರ ಅಸಮಾಧಾನಕರ ಎಂದು ಯಮುನಾ ನದಿ ಶುದ್ಧೀಕರಣ ಮೇಲ್ವಿಚಾರಣೆಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನಿಯೋಜಿಸಿದ ಸಮಿತಿ ತಿಳಿಸಿದೆ.

ಯಮುನಾ ನದಿ ಶುದ್ಧೀಕರಣದ ಮೇಲ್ವಿಚಾರಣೆ ನಡೆಸಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಅಧ್ಯಕ್ಷ ಎ.ಕೆ. ಗೋಯಲ್ ಸಮಿತಿಯೊಂದನ್ನು ರೂಪಿಸಿತ್ತು. ಈ ಸಮಿತಿ ದಿಲ್ಲಿಯ ಮಾಜಿ ಮುಖ್ಯ ಕಾರ್ಯದರ್ಶಿ ಶೈಲಜಾ ಚಂದ್ರ, ನಿವೃತ್ತ ಸದಸ್ಯ ಬಿ.ಎಸ್. ಸಜ್ವಾನ್ ಅವರನ್ನು ಒಳಗೊಂಡಿತ್ತು. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಜುಲೈ 26ರಂದು ಆದೇಶ ನೀಡಿದ ಬಳಿಕ ಉತ್ತರಪ್ರದೇಶದ ಪ್ರತಿಕ್ರಿಯೆ ತೀವ್ರ ಅಸಮಾಧಾನಕರ ಎಂದು ಮೇಲ್ವಿಚಾರಣಾ ಸಮಿತಿ ಹೇಳಿದೆ. ರಾಜ್ಯ ಮುಖ್ಯ ಕಾರ್ಯದರ್ಶಿ ಅವರಿಗೆ ಮತ್ತೆ ಮತ್ತೆ ಪತ್ರ ಬರೆದ ಹಾಗೂ ಅವರ ಕಚೇರಿಗೆ ದೂರವಾಣಿ ಕರೆ ಮಾಡಿದ ಹೊರತಾಗಿಯೂ ಸರಕಾರದ ಈ ಪ್ರತಿಕ್ರಿಯೆ ವಿಷಾದನೀಯ ಎಂದು ಅವರು ಹೇಳಿದೆ.

‘‘ಉತ್ತರಪ್ರದೇಶ ಪರಿಸರ ಹಾಗೂ ಅರಣ್ಯ ಇಲಾಖೆಯ ಕಾರ್ಯದರ್ಶಿ ಯಮುನಾ ಶುದ್ದೀಕರಣಕ್ಕೆ ಎರಡು ಅವಕಾಶಗಳ ಅಗತ್ಯತೆ ಇದೆ ಎಂದು ಫೋನ್‌ನಲ್ಲಿ ತಿಳಿಸಿರುವುದಾಗಿ’’ ಮೇಲ್ವಿಚಾರಣಾ ಸಮಿತಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News