×
Ad

ಫಿಫಾ ಅಧ್ಯಕ್ಷ ಸ್ಥಾನಕ್ಕೆ ಇನ್ಫಾಂಟಿನೊ ಏಕೆಕ ಸ್ಪರ್ಧಿ

Update: 2019-02-06 23:35 IST

ಲಾಸನ್, ಫೆ.6: ಅಂತರ್‌ರಾಷ್ಟ್ರೀಯ ಫುಟ್ಬಾಲ್ ಅಸೋಸಿಯೇಶನ್(ಫಿಫಾ) ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಗಿಯಾನೊ ಇನ್ಫಾಂಟಿನೊ ಅವರೇ ಮುಂದುವರಿಯುವ ಸಾಧ್ಯತೆ ಕಂಡು ಬರುತ್ತಿದೆ. ಜೂನ್‌ನಲ್ಲಿ ನಡೆಯುವ ಚುನಾವಣೆಗೆ ಇನ್ಫಾಂಟಿನೊ ಏಕೈಕ ಅಭ್ಯರ್ಥಿಯಾಗಿದ್ದಾರೆ ಎಂದು ಬುಧವಾರ ವಿಶ್ವ ಫುಟ್ಬಾಲ್ ಆಡಳಿತ ಮಂಡಳಿ ತಿಳಿಸಿದೆ. ಭ್ರಷ್ಟಾಚಾರ ಆರೋಪದಲ್ಲಿ ಈ ಹಿಂದಿನ ಅಧ್ಯಕ್ಷ ಸೆಪ್ ಬಾಟ್ಲರ್ ಹುದ್ದೆ ಕಳೆದುಕೊಂಡ ಬಳಿಕ 46 ವರ್ಷದ ಇನ್ಫಾಂಟಿನೊ ಫೆ.2016ರಿಂದ ಅಧ್ಯಕ್ಷ ಹುದ್ದೆ ಅಲಂಕರಿಸಿದ್ದಾರೆ. ಮಹಿಳಾ ಫುಟ್ಬಾಲ್ ವಿಶ್ವಕಪ್ ಟೂರ್ನಿ ಗಿಂತ ಮುಂಚೆ ಜೂ.5ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಟೊಟ್ಟೆನ್‌ಹ್ಯಾಮ್ ತಂಡದ ಮಾಜಿ ಡಿಫೆಂಡರ್ ರಾಮೊನ್ ವೆಗಾ ಅವರು ಇನ್ಫಾಂಟಿನೊ ವಿರುದ್ಧ ಸ್ಪರ್ಧಿಸುವ ಇಚ್ಛೆ ಹೊಂದಿದ್ದರೂ 211 ಸದಸ್ಯ ರಾಷ್ಟ್ರಗಳಲ್ಲಿ ಬೆಂಬಲಕ್ಕೆ ಅವಶ್ಯವಿದ್ದ 5 ಸದಸ್ಯ ರಾಷ್ಟ್ರಗಳೂ ಅವರಿಗೆ ಬೆಂಬಲ ನೀಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News