ಮೈ ನೇಮ್ ಈಸ್ ರಾಗಾ ಟ್ರೈಲರ್ ಬಿಡುಗಡೆ
ಹೊಸದಿಲ್ಲಿ, ಫೆ.10: ಇದೀಗ ಬಾಲಿವುಡ್‌ನಲ್ಲಿ ಜೀವನಚರಿತ್ರೆ ಆಧಾರಿತ ಸಿನೆಮಗಳ ಯುಗ. ಮನಮೋಹನ್ ಸಿಂಗ್ ಅವರ ಪ್ರಧಾನಿ ಅಧಿಕಾರಾವಧಿಯ ಕುರಿತಾದ ಸಿನೆಮ ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ನ ಬಳಿಕ ಈಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಜೀನವ ಕಥೆಯನ್ನಾಧರಿತ ಸಿನೆಮ ಎನ್ನಲಾದ ಮೈ ನೇಮ್ ಈಸ್ ‘ರಾಗಾ’ ಈಗ ಸಿದ್ಧಗೊಳ್ಳುತ್ತಿದೆ.
ಈ ಸಿನೆಮದ ಟೀಸರ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ಘಟನೆಯೊಂದಿಗೆ ಈ ಸಿನೆಮ ಆರಂಭಗೊಳ್ಳುತ್ತಿದೆ. ಈ ಸಿನೆಮದಲ್ಲಿ ರಾಹುಲ್ ಗಾಂಧಿಯವರನ್ನು ವೈಭವೀಕರಿಸುವ ಅಥವಾ ವಿಶದಗೊಳಿಸುವ (ಅವರ ವ್ಯಕ್ತಿತ್ವವನ್ನು ಸ್ಪಷ್ಟಗೊಳಿಸುವ) ಉದ್ದೇಶವಿಲ್ಲ ಎಂದು ಸಿನೆಮದ ನಿರ್ದೇಶಕ ಪೌಲ್ ರೂಪೇಶ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಹಾಸ್ಯಾಸ್ಪದವಾಗಿ ದಾಳಿಗೊಳಗಾಗಿದ್ದ ವ್ಯಕ್ತಿಯೊಬ್ಬ ಚೇತರಿಸಿ ಹೊಸ ಮನುಷ್ಯನಾಗುವ ಕಥೆಯನ್ನು ಸಿನೆಮ ಹೊಂದಿದೆ. ಸೋಲು ಮತ್ತು ವೈಫಲ್ಯವನ್ನು ಎದುರಿಸಿದ ವ್ಯಕ್ತಿಯ ಕತೆಯಿದು. ದುರಂತ ಬದುಕನ್ನು ಮೀರಿ ನಿಂತು ಬಳಿಕ ತಡೆಯಿಲ್ಲದೆ ಮುನ್ನುಗ್ಗುವ ವ್ಯಕ್ತಿಯ ಕುರಿತ ಸಿನೆಮ ಇದಾಗಿದೆ ಎಂದವರು ತಿಳಿಸಿದ್ದಾರೆ.