ಸತತ ಎರಡನೇ ಚಿನ್ನದ ನಿರೀಕ್ಷೆಯಲ್ಲಿ ಅಮಿತ್
Update: 2019-02-13 23:56 IST
ಹೊಸದಿಲ್ಲಿ, ಫೆ.13: ಬಲ್ಗೇರಿಯದ ಸೋಫಿಯಾದಲ್ಲಿ ಗುರುವಾರದಿಂದ ಆರಂಭವಾಗಲಿರುವ ಸ್ಟ್ರಾಂಡ್ಜಾ ಸ್ಮಾರಕ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ಅಮಿತ್ ಪಾಂಘಾಲ್ (49 ಕೆಜಿ ವಿಭಾಗ)ಸತತ ಎರಡನೇ ಬಾರಿ ಚಿನ್ನ ಗೆಲ್ಲುವತ್ತ ಚಿತ್ತವಿರಿಸಿದ್ದಾರೆ.
19 ಬಾಕ್ಸರ್‌ಗಳ ತಂಡ ಭಾರತ ತಂಡವನ್ನು ಪ್ರತಿನಿಧಿಸಲಿದೆ. ಇದರಲ್ಲಿ 10 ಮಹಿಳಾ ಬಾಕ್ಸರ್‌ಗಳಿದ್ದಾರೆ. ಅಮಿತ್ ಜಕಾರ್ತದಲ್ಲಿ ಬಾಕ್ಸಿಂಗ್‌ನಲ್ಲಿ ಚಿನ್ನ ಜಯಿಸಿದ ಭಾರತದ ಏಕೈಕ ಬಾಕ್ಸರ್ ಎನಿಸಿಕೊಂಡ ಬಳಿಕ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿಲ್ಲ. ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಗೌರವ್ ಸೋಳಂಕಿ(52ಕೆಜಿ)ಕಳೆದ ವರ್ಷ ಬೆಳ್ಳಿ ಪದಕ ಜಯಿಸಿದ್ದು, ಈ ವರ್ಷ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.