ಕಪಿಲ್‌ದೇವ್ ದಾಖಲೆ ಮುರಿದ ಸ್ಟೇಯ್ನ್

Update: 2019-02-14 18:15 GMT

ಡರ್ಬನ್, ಫೆ.14: ದಕ್ಷಿಣ ಆಫ್ರಿಕದ ಹಿರಿಯ ವೇಗದ ಬೌಲರ್ ಡೇಲ್ ಸ್ಟೇಯ್ನ್ ಭಾರತದ ಕ್ರಿಕೆಟ್ ದಂತಕತೆ ಕಪಿಲ್‌ದೇವ್ ದಾಖಲೆೊಂದನ್ನು ಮುರಿದು ಗಮನ ಸೆಳೆದಿದ್ದಾರೆ. ಶ್ರೀಲಂಕಾ ವಿರುದ್ಧ ಗುರುವಾರ ನಡೆದ ಮೊದಲ ಟೆಸ್ಟ್‌ನ 2ನೇ ದಿನದಾಟದಲ್ಲಿ ಸ್ಟೇಯ್ನ್

48 ರನ್‌ಗೆ ಒಟ್ಟು 4 ವಿಕೆಟ್‌ಗಳನ್ನು ಪಡೆದರು. ಲಂಕಾವನ್ನು 191 ರನ್‌ಗೆ ಆಲೌಟ್ ಮಾಡಲು ನೆರವಾದ ಸ್ಟೇಯ್ನ ತನ್ನ ತಂಡಕ್ಕೆ ಮೊದಲ ಇನಿಂಗ್ಸ್‌ನಲ್ಲಿ 44 ರನ್ ಮುನ್ನಡೆ ಒದಗಿಸಿಕೊಟ್ಟರು. ಜೊತೆಗೆ ವೈಯಕ್ತಿಕ ದಾಖಲೆಯೊಂದನ್ನು ನಿರ್ಮಿಸಿದರು.

ಒಟ್ಟು 437 ವಿಕೆಟ್‌ಗಳನ್ನು ಪಡೆದ ಸ್ಟೇಯ್ನ, ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ದಾಖಲೆಯನ್ನು ಸರಿಗಟ್ಟಿದರು. ಕಪಿಲ್‌ದೇವ್(434 ವಿಕೆಟ್)ದಾಖಲೆಯನ್ನು ಮುರಿದು ಮುನ್ನುಗ್ಗಿದರು. ಸ್ಟೇಯ್ನಿ ಗರಿಷ್ಠ ವಿಕೆಟ್ ಪಡೆದವರ ವಿಶ್ವ ಬೌಲರ್‌ಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ.

ಶ್ರೀಲಂಕಾದ ಮುತ್ತಯ್ಯ ಮುರಳೀಧರನ್(800 ವಿಕೆಟ್)ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಶೇನ್ ವಾರ್ನ್(708), ಅನಿಲ್ ಕುಂಬ್ಳೆ(619), ಜೇಮ್ಸ್ ಆ್ಯಂಡರ್ಸನ್(575), ಗ್ಲೆನ್ ಮೆಕ್‌ಗ್ರಾತ್(563) ಹಾಗೂ ಕೊರ್ಟ್ನಿ ವಾಲ್ಢ್(516) ಸ್ಟೇಯ್ನ್‌ಗಿಂತ ಮುಂದಿರುವ ಐವರು ಬೌಲರ್‌ಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News