ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಹೆಚ್ಚಳ

Update: 2019-02-14 18:26 GMT

ಹೊಸದಿಲ್ಲಿ, ಫೆ. 14: ಕೇಂದ್ರ ಸರಕಾರ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಪ್ರತಿ ಕಿ.ಗ್ರಾಂ.ಗೆ 2 ರೂಪಾಯಿ ಹೆಚ್ಚಿಸಿದ್ದು, 31 ರೂಪಾಯಿಗೆ ಏರಿಕೆಯಾಗಿದೆ ಎಂದು ಆಹಾರ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಕಬ್ಬು ಬೆಳೆಯುವ ರೈತರಿಗೆ ಜನವರಿ ಅಂತ್ಯದಿಂದ 20,000 ಕೋಟಿ ರೂ. ನೀಡಲು ಬಾಕಿ ಇದೆ ಎಂದು ಕೈಗಾರಿಕಾ ಸಂಘಟನೆ ಐಎಸ್‌ಎಂಎ ಹೇಳಿದೆ. ‘‘ನಾವು ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಪ್ರತಿ ಕಿ.ಗ್ರಾಂ.ಗೆ ರೂ. 29ರಿಂದ ರೂ. 31 ಏರಿಕೆ ಮಾಡಿದ್ದೇವೆ. ಇದು ಮಿಲ್ ಮಾಲಕರು ಕಬ್ಬು ಬೆಳೆಸುವ ರೈತರಿಗೆ ಬಾಕಿ ಪಾವತಿ ಮಾಡಲು ಸಹಾಯಕವಾಗಲಿದೆ’’ ಎಂದು ಅವರು ಹೇಳಿದ್ದಾರೆ. ಕಬ್ಬು ಬೆಳೆಗಾರ ರೈತರ ಪಾವತಿ ಬಾಕಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಠ ಮಾರಾಟ ಬೆಲೆ ಹೆಚ್ಚಿಸಲಾಗಿದೆ. ಕಾರ್ಯದರ್ಶಿಗಳ ಸಮಿತಿಯ ನಿರ್ದೇಶನದ ಹಿನ್ನೆಲೆಯಲ್ಲಿ ಸಕ್ಕರೆ ಬೆಲೆಯನ್ನು ಪ್ರತಿ ಕೆ.ಜಿ.ಗೆ ರೂ. 2 ಹೆಚ್ಚಿಸಲಾಗಿದೆ ಎಂದು ಪಾಸ್ವಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News