ನಾಳೆ ಸಮರಶಕ್ತಿ ಪ್ರದರ್ಶಿಸಲಿರುವ ವಾಯುಪಡೆ

Update: 2019-02-15 18:15 GMT

ಜೈಸಲ್ಮೇರ್, ಫೆ.15: ಪೋಖರಣ್‌ನಲ್ಲಿ ಶನಿವಾರ ನಡೆಯಲಿರುವ ‘ವಾಯು ಶಕ್ತಿ-2019’ ಕಸರತ್ತು ಪ್ರದರ್ಶನದಲ್ಲಿ ಭಾರತೀಯ ವಾಯುಪಡೆ ತನ್ನ ಮಿಲಿಟರಿ ಶಕ್ತಿಯ ಪೂರ್ಣ ಬಲ ಹಾಗೂ ವಿಸ್ತೃತ ಶ್ರೇಣಿಯ ಯುದ್ದವಿಮಾನಗಳ ಶಕ್ತಿಯನ್ನು ಪ್ರದರ್ಶಿಸಲಿದೆ.

ಆಕಾಶ್ ಕ್ಷಿಪಣಿ ಪ್ರಯೋಗ, ಸುಧಾರಿತ ಲಘು ಹೆಲಿಕಾಪ್ಟರ್(ಎಎಲ್‌ಎಚ್)ನಿಂದ ಗುಂಡು ಹಾರಾಟ, ಮಿಗ್ 29ರಿಂದ ಆಕಾಶದಿಂದ ಭೂಮಿಯ ಮೇಲಿನ ಗುರಿಗೆ ನಿರ್ದಿಷ್ಟ ಮತ್ತು ನಿಖರವಾಗಿ ದಾಳಿ ನಡೆಸುವುದು ಸೇರಿದಂತೆ ನಾಲ್ಕು ಪ್ರಪ್ರಥಮ ಯುದ್ಧಸಾಮರ್ಥ್ಯದ ಪ್ರದರ್ಶನ ಇದರಲ್ಲಿ ಸೇರಿದ್ದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪಾಲ್ಗೊಳ್ಳಲಿದ್ದಾರೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

ದೇಶೀಯ ನಿರ್ಮಿತ ಶಸ್ತ್ರಾಸ್ತ್ರಗಳು, ಆಕಾಶ್(ಮಧ್ಯಮ ವ್ಯಾಪ್ತಿಯ ನೆಲದಿಂದ ಆಗಸಕ್ಕೆ ಹಾರಿಸುವ )ಕ್ಷಿಪಣಿಗಳು, ಅಸ್ತ್ರ( ಎಲ್ಲಾ ಋತುವಿನಲ್ಲೂ ಉಡಾಯಿಸಬಹುದಾದ, ದೃಷ್ಟಿಗೆ ಗೋಚರಿಸದ, ಆಕಾಶದಿಂದ ಆಕಾಶಕ್ಕೆ ಹಾರಿ ಬಿಡುವ ಕ್ಷಿಪಣಿ), ಲಘು ಯುದ್ಧವಿಮಾನ ತೇಜಸ್, ಮಿಗ್ 29, ಜಾಗ್ವಾರ್, ಸುಖೋಯಿ, ಮಿರಾಜ್-2000ನಂತಹ ಯುದ್ಧವಿಮಾನಗಳು, ಎಎನ್-32, ಸಿ130, ಎಂಐ-17 ವಿಎಸ್ ಮತ್ತು ಎಂಐ-35 ಹೆಲಿಕಾಪ್ಟರ್‌ಗಳು, ವಾಯುಮಾರ್ಗದಲ್ಲಿ ಎದುರಾಗುವ ಅಪಾಯಗಳನ್ನು ಮೊದಲೇ ತಿಳಿಸುವ ವ್ಯವಸ್ಥೆ(ಎಇಡಬ್ಲೂಆ್ಯಂಡ್ ಸಿ), ಗುರಿಗಳನ್ನು ಅನ್ವೇಷಿಸುವ ಸಾಮರ್ಥ್ಯ, ಬಹು ವಿಸ್ತೃತ ಸಾಮರ್ಥ್ಯ, ಗುರಿಗಳನ್ನು ತ್ವರಿತ ಗುರುತಿಸಿ ಅದನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಪ್ರದರ್ಶಿಸಲಾಗುವುದು. 1ಗಂಟೆ 55 ನಿಮಿಷಾವಧಿಯ ಕಾರ್ಯಕ್ರಮ ಇದಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News