ಅಝ್ಲಾನ್ ಹಾಕಿ ಟೂರ್ನಿಯ ಪೂರ್ವ ತಯಾರಿ ಶಿಬಿರಕ್ಕೆ ಭಾರತ ಹಾಕಿ ತಂಡ ಪ್ರಕಟ

Update: 2019-02-16 18:19 GMT

ಹೊಸದಿಲ್ಲಿ,ಫೆ.16: ಮಲೇಶ್ಯಾದಲ್ಲಿ ನಡೆಯುವ ಸುಲ್ತಾನ್ ಅಝ್ಲಾನ್ ಶಾ ಹಾಕಿ ಟೂರ್ನಮೆಂಟ್ ಪೂರ್ವ ತಯಾರಿಗೆ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ(ಸಾಯ್) ಫೆ.18 ರಂದು ಆರಂಭವಾಗುವ ಹಿರಿಯ ಆಟಗಾರರ ರಾಷ್ಟ್ರೀಯ ಶಿಬಿರಕ್ಕೆ ಹಾಕಿ ಇಂಡಿಯಾ ಶನಿವಾರ 34 ಸದಸ್ಯರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದೆ.

ಮಲೇಶ್ಯಾದ ಇಪೋದಲ್ಲಿ ಸುಲ್ತಾನ್ ಅಝ್ಲಾನ್ ಶಾ ಹಾಕಿ ಟೂರ್ನಮೆಂಟ್ ಮಾ.23 ರಂದು ಆರಂಭವಾಗಲಿದೆ.

ಹಾಕಿ ಇಂಡಿಯಾ ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ 18 ಆಟಗಾರರನ್ನು ಭಾರತೀಯ ತಂಡದಲ್ಲಿ ಉಳಿಸಿಕೊಂಡಿದೆ. ಮಾ.18 ರಂದು ಕೊನೆಯಾಗುವ ತಿಂಗಳ ಕಾಲ ನಡೆಯುವ ಹಾಕಿ ಶಿಬಿರದಲ್ಲಿ ಭಾಗವಹಿಸುವ 34 ಸದಸ್ಯರ ತಂಡದಲ್ಲಿ ಶೈಲಾನಂದ ಲಕ್ರಾ, ಸುಮನ್ ಬೆಕ್, ಮಂದೀಪ್ ಮೊರ್, ಯಶ್‌ದೀಪ್ ಸಿವಾಚ್, ವಿಶಾಲ್ ಅಂಟಿಲ್ ಹಾಗೂ ಗುರುಸಹಬ್ಜಿತ್ ಸಿಂಗ್ ಅವರು ಭಾಗವಹಿಸಲಿದ್ದಾರೆ.

‘‘ಫೆಬ್ರವರಿಯ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಆಯ್ಕೆ ಟ್ರಯಲ್ ಕೊನೆಗೊಂಡ ಬಳಿಕ 34 ಆಟಗಾರರ ಕೋರ್ ಗ್ರೂಪ್‌ನಿಂದ 28ನೇ ಆವೃತ್ತಿಯ ಸುಲ್ತಾನ್ ಅಝ್ಲಾನ್ ಶಾ ಕಪ್‌ಗೆ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಇತ್ತೀಚೆಗಷ್ಟೇ ಹಿರಿಯ ಆಟಗಾರರ ಶಿಬಿರಕ್ಕೆ ಸೇರ್ಪಡೆಯಾಗಿರುವ ಜೂನಿಯರ್ ಆಟಗಾರರು ಗಮನಾರ್ಹ ಪ್ರಗತಿ ಸಾಧಿಸಿದ್ದನ್ನು ನೋಡಿ ನನಗೆ ಸಂತೋಷವಾಗುತ್ತಿದೆ’’ ಎಂದು ಹಾಕಿ ಇಂಡಿಯಾದ ಉನ್ನತ ಪ್ರದರ್ಶನ ನಿರ್ದೇಶಕ ಡೇವಿಡ್ ಜಾನ್ ಹೇಳಿದ್ದಾರೆ.

ಭಾರತ ಹಾಕಿ ತಂಡ

►ಗೋಲ್‌ಕೀಪರ್‌ಗಳು: ಪಿ.ಆರ್.ಶ್ರೀಜೇಶ್, ಸೂರಜ್ ಕರ್ಕೇರ, ಕೃಷ್ಣ ಬಹದೂರ್ ಪಾಠಕ್.

►ಡಿಫೆಂಡರ್‌ಗಳು: ಹರ್ಮನ್‌ಪ್ರೀತ್ ಸಿಂಗ್, ಗುರಿಂದರ್ ಸಿಂಗ್, ವರುಣ ಕುಮಾರ್, ಕೊಥಜಿತ್ ಸಿಂಗ್, ಸುರೇಂದರ ಕುಮಾರ್, ಅಮಿತ್ ರೋಹಿದಾಸ್, ಜರ್ಮನ್‌ಪ್ರೀತ್ ಸಿಂಗ್,ಪರ್ದೀಪ್ ಸಿಂಗ್, ಸುಮನ್ ಬೆಕ್, ಮನ್‌ದೀಪ್ ಮೊರ್, ಬೀರೇಂದ್ರ ಲಕ್ರಾ, ರೂಪಿಂದರ್‌ಪಾಲ್ ಸಿಂಗ್.

►ಮಿಡ್‌ಫೀಲ್ಡರ್‌ಗಳು: ಮನ್‌ಪ್ರೀತ್ ಸಿಂಗ್, ಚಿಂಗ್ಲೆಸನಾ ಸಿಂಗ್, ಸುಮಿತ್, ಸಿಮ್ರಾನ್‌ಜಿತ್ ಸಿಂಗ್, ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್, ಲಲಿತ್ ಕುಮಾರ ಉಪಾಧ್ಯಾಯ, ವಿವೇಕ್ ಸಾಗರ್ ಪ್ರಸಾದ್, ಯಶ್‌ದೀಪ್ ಸಿವಾಚ್, ವಿಶಾಲ್ ಅಂಟಿಲ್.

►ಫಾರ್ವರ್ಡ್‌ಗಳು: ಆಕಾಶ್‌ದೀಪ್ ಸಿಂಗ್, ರಮಣ್‌ದೀಪ್ ಸಿಂಗ್, ಗುರ್ಜಂತ್ ಸಿಂಗ್, ಮನ್‌ದೀಪ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಸುಮಿತ್ ಕುಮಾರ್, ಗುರುಸಹಾಬ್‌ಜಿತ್ ಸಿಂಗ್, ಶೀಲಾನಂದ ಲಕ್ರಾ, ಎಸ್.ವಿ.ಸುನೀಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News